ನಮ್ಮ ತೆರಿಗೆಯಲ್ಲಿ ನಮ್ಮ ಹಕ್ಕು ಸಿಕ್ಕರೆ ಗೃಹಲಕ್ಷ್ಮಿ ಯೋಜನೆ ಸಹಾಯಧನ ರೂ. 4,000ಕ್ಕೆ ಹೆಚ್ಚಿಸಲು ಅಭ್ಯಂತರವಿರಲ್ಲ: ಡಿಕೆ ಸುರೇಶ್

ನಮ್ಮ ತೆರಿಗೆಯಲ್ಲಿ ನಮ್ಮ ಹಕ್ಕು ಸಿಕ್ಕರೆ ಗೃಹಲಕ್ಷ್ಮಿ ಯೋಜನೆ ಸಹಾಯಧನ ರೂ. 4,000ಕ್ಕೆ ಹೆಚ್ಚಿಸಲು ಅಭ್ಯಂತರವಿರಲ್ಲ: ಡಿಕೆ ಸುರೇಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 29, 2024 | 6:42 PM

ನಮ್ಮ ತೆರಿಗೆಯಲ್ಲಿ ನಮ್ಮ ಯೋಗ್ಯ ಪಾಲು ಸಿಕ್ಕರೆ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಗಳಿಗೆ ಗೃಹ ಲಕ್ಷ್ಮಿ ಯೋಜೆನೆ ಅಡಿ ನೀಡಲಾಗುತ್ತಿರುವ ಮಾಹೆಯಾನ ರೂ. 2,000 ಸಹಾಯಧನವನ್ನು ರೂ. 4.000 ಗಳಿಗೆ ಹೆಚ್ಚಿಸಲು ಯಾವುದೇ ಅಭ್ಯಂತರವಿರಲ್ಲ ಎಂದು ಸುರೇಶ್ ಹೇಳಿದರು.

ರಾಮನಗರ: ಗೃಹಲಕ್ಷ್ಮಿ ಯೋಜನೆ (Gruha Lakshmi scheme ) ಅಡಿ ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು ನೀಡುತ್ತಿರುವ ರೂ. 2,000 ಹಣವನ್ನು ದುಪ್ಪಟ್ಟು ಮಾಡಲಿದೆಯೇ? ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹೇಳುವ ಪ್ರಕಾರ ಅದು ಸಾಧ್ಯ. ಆದರೆ ಅದಕ್ಕೊಂದು ಷರತ್ತನ್ನು ಅವರು ಹೇಳುತ್ತಾರೆ. ತೆರಿಗೆಗಳ ರೂಪದಲ್ಲಿ ರಾಜ್ಯದಲ್ಲಿ ಸಂಗ್ರಹವಾಗುವ ರೂ 4.30 ಲಕ್ಷ ಕೋಟಿ ಹಣ ಕೇಂದ್ರಕ್ಕೆ ಹೋಗುತ್ತದೆ. ಆ ಮೊತ್ತದಲ್ಲಿ ಶೇಕಡ 60ರಷ್ಟು ಹಣ ರಾಜ್ಯಕ್ಕೆ ವಾಪಸ್ಸು ಬಂದರೆ ಕರ್ನಾಟಕ ಸರ್ಕಾರ ನೀರಾವರಿ ಯೋಜನೆಗಳನ್ನು (Irrigation projects) ಪೂರ್ತಿಗೊಳಿಸುತ್ತದೆ, ರಸ್ತೆಗಳನ್ನು ನಿರ್ಮಿಸುತ್ತದೆ ಮತ್ತು ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕಡೆ ಹಣ ವ್ಯಯಿಸುತ್ತದೆ ಎಂದು ಸುರೇಶ್ ಹೇಳಿದರು. ಅಷ್ಟು ಮಾತ್ರವಲ್ಲದೆ, ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಗಳಿಗೆ ಗೃಹ ಲಕ್ಷ್ಮಿ ಯೋಜೆನೆ ಅಡಿ ನೀಡಲಾಗುತ್ತಿರುವ ಮಾಹೆಯಾನ ರೂ. 2,000 ಸಹಾಯಧನವನ್ನು ರೂ. 4.000 ಗಳಿಗೆ ಹೆಚ್ಚಿಸಲು ಯಾವುದೇ ಅಭ್ಯಂತರವಿರಲ್ಲ ಎಂದು ಸುರೇಶ್ ಹೇಳಿದರು. ಜಾತಿಗಣತಿ ವರದಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರದಿಯನ್ನು ಓದದೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲಾಭಾರ್ಥಿಗಳ ಖಾತೆಗಳಿಗೆ ನಾಲ್ಕೈದು ದಿನಗಳಲ್ಲಿ ಹಣ ಜಮೆಯಾಗುತ್ತದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ