AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬುದ್ಧಿ ಇದೆಯೇನಯ್ಯ?’; ದೇವಸ್ಥಾನದಲ್ಲಿ ರಾಜಕೀಯದ ಪ್ರಶ್ನೆ ಕೇಳಿದ್ದಕ್ಕೆ ಯಶ್​ ಗರಂ

‘ಬುದ್ಧಿ ಇದೆಯೇನಯ್ಯ?’; ದೇವಸ್ಥಾನದಲ್ಲಿ ರಾಜಕೀಯದ ಪ್ರಶ್ನೆ ಕೇಳಿದ್ದಕ್ಕೆ ಯಶ್​ ಗರಂ

ಮದನ್​ ಕುಮಾರ್​
|

Updated on: Feb 29, 2024 | 5:01 PM

Share

ಸಿನಿಮಾದ ಕೆಲಸಗಳಲ್ಲಿ ಯಶ್​ ಬ್ಯುಸಿ ಆಗಿದ್ದಾರೆ. ಹಾಗಿದ್ದರೂ ಬಿಡುವು ಮಾಡಿಕೊಂಡು ದೇವಸ್ಥಾನದ ಉದ್ಘಾಟನೆಗೆ ಅವರು ಬಂದಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಾಗಿದೆ. ಇದರಿಂದ ಯಶ್​ ಕೋಪ ಮಾಡಿಕೊಂಡಿದ್ದಾರೆ. ‘ನಿನಗೇನಾದ್ರೂ ಬುದ್ಧಿ ಇದೆಯೇನಯ್ಯ’ ಎಂದು ಅವರು ಮಾಧ್ಯಮದವರ ಮೇಲೆ ಸಿಟ್ಟು ತೋರಿಸಿದ್ದಾರೆ.

ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದೆ. ಎಲ್ಲ ಪಕ್ಷಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಅನೇಕ ಸ್ಟಾರ್ ಕಲಾವಿದರು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಹಾಗಾಗಿ ಯಾವುದೇ ಸೆಲೆಬ್ರಿಟಿ ಎಲ್ಲಿಯೇ ಸಿಕ್ಕರೂ ರಾಜಕೀಯದ ಪ್ರಶ್ನೆ ಎದುರಾಗುತ್ತದೆ. ಇಂದು (ಫೆಬ್ರವರಿ 29) ನಟ ಯಶ್​ (Yash) ಅವರು ಬಳ್ಳಾರಿಯಲ್ಲಿ ಶ್ರೀ ಅಮೃತೇಶ್ವರ ದೇವಸ್ಥಾನದ ಉದ್ಘಾಟನೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರಿಗೆ ಸುಮಲತಾ ಅಂಬರೀಷ್​ಗೆ ಸಂಬಂಧಿಸಿದ ರಾಜಕೀಯದ ಬೆಳೆವಣಿಗೆಗಳ ಕುರಿತು ಪ್ರಶ್ನೆ ಕೇಳಲು ಮಾಧ್ಯಮದ ಪ್ರತಿನಿಧಿಗಳು ಮುಂದಾಗಿದ್ದಾರೆ. ಆಗ ಯಶ್​ ಗರಂ ಆಗಿದ್ದಾರೆ. ‘ನಿನಗೇನಾದ್ರೂ ಬುದ್ಧಿ ಇದೆಯೇನಯ್ಯ? ರಾಜಕೀಯದ ಬಗ್ಗೆ ಪ್ರಶ್ನೆ ಕೇಳುವ ಜಾಗ ಇದಾ? ಹಿಂಗೆಲ್ಲ ಮಾಡಬಾರದು’ ಎಂದು ಯಶ್​ ಹೇಳಿದ್ದಾರೆ. ಒಟ್ಟಿನಲ್ಲಿ ಅವರು ರಾಜಕೀಯದ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಈ ಬಾರಿ ಅವರು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಾರೋ ಇಲ್ಲವೋ ಎಂಬ ಕೌತುಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More