ವಿಡಿಯೋ: ಯಶ್ರ ಸರಳತೆ ಸಾರಿದ್ದ ವೈರಲ್ ಫೋಟೊ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್
Yash: ಯಶ್ ಹಾಗೂ ರಾಧಿಕಾ ಪಂಡಿತ್ ಸಾಮಾನ್ಯ ಅಂಗಡಿಯೊಂದರಿಂದ ತಮ್ಮ ಮಕ್ಕಳಿಗೆ ತಿಂಡಿ ಕೊಡಿಸುತ್ತಿರುವ ಚಿತ್ರಗಳು ಇತ್ತೀಚೆಗೆ ವೈರಲ್ ಆಗಿದ್ದವು, ಆ ಚಿತ್ರಗಳ ಬಗ್ಗೆ ಯಶ್ ಇದೀಗ ಮಾತನಾಡಿದ್ದಾರೆ.
ಯಶ್ (Yash) ಅವರ ಕುಟುಂಬದ ಚಿತ್ರಗಳು ಕೆಲವು ದಿನಗಳ ಹಿಂದಷ್ಟೆ ಸಖತ್ ವೈರಲ್ ಆಗಿದ್ದವು. ಸಾಧಾರಣ ಅಂಗಡಿಯೊಂದರ ಮುಂದೆ ರಾಧಿಕಾ ಪಂಡಿತ್ ಐಸ್ಕ್ಯಾಂಡಿ ಚೀಪುತ್ತಾ ಕೂತಿದ್ದರೆ ನಟ ಯಶ್, ತಮ್ಮ ಮಕ್ಕಳಿಗೆ ಅಂಗಡಿಯ ತಿಂಡಿಗಳನ್ನು ಕೊಡಿಸುತ್ತಿದ್ದರು. ಈ ಫೋಟೊ ಸಖತ್ ವೈರಲ್ ಆಗಿದ್ದು, ಯಶ್ ಹಾಗೂ ರಾಧಿಕಾರ (Radhika)ಸರಳತೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇಂದು (ಫೆಬ್ರವರಿ 29) ಯಶ್ ಬಳ್ಳಾರಿಯ ಅಮೃತೇಶ್ವರ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಬಳಿ ಮಾತನಾಡುತ್ತಾ, ವೈರಲ್ ಆಗಿದ್ದ ತಮ್ಮ ಕುಟುಂಬದ ಚಿತ್ರದ ಬಗ್ಗೆ ಮಾತನಾಡಿದರು. ‘ಸರಳತೆ ಎಂಬುದು ನಮಗೆ ಹೊಸದೇನೂ ಅಲ್ಲ. ಹಲವು ವರ್ಷಗಳಿಂದ ಆ ದೇವಾಲಯಕ್ಕೆ ಹೋದಾಗಲೆಲ್ಲ ಅದೇ ಅಂಗಡಿಗೆ ನಾವು ಹೋಗುತ್ತೇವೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ