Karnataka Budget Session: ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2008 ಬಾಂಬಿಟ್ಟಿದ್ದ ನಾಜಿರ್ ನ ಸಹಚರರೇ ಈ ನಾಸೀರ್ ಹುಸ್ಸೇನ್ ಜೊತೆಯಿದ್ದಾರೆ: ಮುನಿರತ್ನ ಬಿಜೆಪಿ ಶಾಸಕ

Karnataka Budget Session: ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2008 ಬಾಂಬಿಟ್ಟಿದ್ದ ನಾಜಿರ್ ನ ಸಹಚರರೇ ಈ ನಾಸೀರ್ ಹುಸ್ಸೇನ್ ಜೊತೆಯಿದ್ದಾರೆ: ಮುನಿರತ್ನ ಬಿಜೆಪಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 29, 2024 | 2:40 PM

Karnataka Budget Session: ತಮಗಿರುವ ಮಾಹಿತಿಯೇ ಗೃಹ ಸಚಿವ ಜಿ ಪರಮೇಶ್ವರ ಅವರಿಗೂ ಇದೆ, ಆದರೆ ಗೊತ್ತಿದ್ದೂ ಅವರು ಸುಮ್ಮನಿದ್ದಾರೆ, ಸರ್ಕಾರ ತನಗೆ ಅನುಕೂಲವಾಗುವ ರೀತಿಯಲ್ಲಿ ದಾಖಲೆಗಳನ್ನು ತಯಾರಿ ಮಾಡಿಕೊಳ್ಳುವಲ್ಲಿ ನಿರತವಾಗಿದೆ ಎಂದು ಮುನಿರತ್ನ ಹೇಳಿದರು.

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ (pro Pakistan slogan) ಕೂಗಿದ ಪ್ರಕರಣಕ್ಕೆ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಹೊಸ ತಿರುವು ನೀಡಿದ್ದಾರೆ. ರಾಜ್ಯಪಾಲರಿಗೆ ಮನವಿ ಸಲ್ಲಿಸಲು ರಾಜಭವನಕ್ಕೆ ತೆರಳುವಾಗ ಟಿವಿ9 ಪ್ರತಿನಿಧಿಯೊಂದಿಗೆ ಮಾತಾಡಿದ ಆವರು, 2008 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್ ಬ್ಲಾಸ್ಟ್ ಮಾಡಿದ ನಾಜಿರ್ ನ ಸಹಚರರೇ ಈಗ ಈ ನಾಸೀರ್ (ಡಾ ಸಯ್ಯದ್ ನಾಸೀರ್ ಹುಸ್ಸೇನ್) (Dr Syed Naseer Hussain) ಜೊತೆ ಇದ್ದಾರೆ ಎಂದು ಹೇಳಿದರು. ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ ನಿಮ್ಮಲ್ಲೇನಾದರೂ ದಾಖಲೆಗಳಿವೆಯಾ ಅಂತ ಟಿವಿ 9 ವರದಿಗಾರ ಕೇಳಿದರೆ, ದಾಖಲೆ ಇಲ್ಲ ಆದರೆ ಜನ ಹೇಳುತ್ತಿರುವ ಮಾಹಿತಿ ಲಬ್ಯವಾಗಿದೆ ಎಂದು ಮುನಿರತ್ನ ಹೇಳಿದರು. ತಮಗಿರುವ ಮಾಹಿತಿಯೇ ಗೃಹ ಸಚಿವ ಜಿ ಪರಮೇಶ್ವರ ಅವರಿಗೂ ಇದೆ, ಆದರೆ ಗೊತ್ತಿದ್ದೂ ಅವರು ಸುಮ್ಮನಿದ್ದಾರೆ, ಸರ್ಕಾರ ತನಗೆ ಅನುಕೂಲವಾಗುವ ರೀತಿಯಲ್ಲಿ ದಾಖಲೆಗಳನ್ನು ತಯಾರಿ ಮಾಡಿಕೊಳ್ಳುವಲ್ಲಿ ನಿರತವಾಗಿದೆ ಎಂದು ಮುನಿರತ್ನ ಹೇಳಿದರು. 2008ರಲ್ಲೇ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾಂಬಿಟ್ಟವರು ವಿಧಾನ ಸೌಧಕ್ಕೆ ಬಾರದಿರುತ್ತಾರೆಯೇ? ನೋಡ್ತಾ ಇರಿ ಅವರೆಲ್ಲ ಅಲ್ಲಿಗೆ ಬಂದೇ ಬರುತ್ತಾರೆ ಎಂದು ಶಾಸಕ ಹೇಳಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಅಕ್ಕಿಕಾಳಿನ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿದೆ: ಮುನಿರತ್ನ ನಾಯ್ಡು