AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​ ಪರ ಘೋಷಣೆ: ವಿಧಿವಿಜ್ಞಾನದಲ್ಲಿ ವಿಡಿಯೋ ತನಿಖೆ ಹೇಗೆ ನಡೆಯುತ್ತದೆ ಗೊತ್ತಾ? ಸೈಬರ್ ಮಾಹಿತಿ ಇಲ್ಲಿದೆ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ವಿಪಕ್ಷ ನಾಯಕರು ಕೆಂಡಕಾರಿದ್ದಾರೆ. ಸದ್ಯ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗುತ್ತಿರುವ ಮೂಲ ವಿಡಿಯೋ ಹಾಗೂ ಆಡಿಯೋವನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದ್ದು ಅಸಲಿ ಸತ್ಯ ಬಯಲಾಗಲಿದೆ. ಎಫ್​ಎಸ್​ಎಲ್​ ತನಿಖೆ ಹೇಗೆ ನಡೆಯುತ್ತೆ ಎಂಬ ಮಾಹಿತಿ ಇಲ್ಲಿದೆ.

ಪಾಕ್​ ಪರ ಘೋಷಣೆ: ವಿಧಿವಿಜ್ಞಾನದಲ್ಲಿ ವಿಡಿಯೋ ತನಿಖೆ ಹೇಗೆ ನಡೆಯುತ್ತದೆ ಗೊತ್ತಾ? ಸೈಬರ್ ಮಾಹಿತಿ ಇಲ್ಲಿದೆ
ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ
Jagadisha B
| Edited By: |

Updated on:Feb 29, 2024 | 2:18 PM

Share

ಬೆಂಗಳೂರು, ಫೆ.29: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ (Pakistan Zindabad Slogans) ಎಂಬ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ದೇಶದ್ರೋಹಿ ಘೋಷಣೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ (BJP) ಕೆಂಡಕಾರಿದ್ದು ಕಾಂಗ್ರೆಸ್ (Congress) ಸಮರ್ಥನೆಯ ಧಾಟಿ ಮುಂದುವರೆದಿದೆ. ವಿಧಾನ ಪರಿಷತ್​ನಲ್ಲೂ ಗಲಾಟೆ-ಗದ್ದಲ ನಡೆಯುತ್ತಿದೆ. ಸದ್ಯ ಪಾಕ್​ನ ಪರ ಘೋಷಣೆ ಕೂಗಲಾಗಿದೆ ಎಂದು ಆರೋಪಿಸಿರುವ ಅಸಲಿ ವಿಡಿಯೋಗಳನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದೆ. ಎಫ್​ಎಸ್​ಎಲ್​ನ (FSL) ಲ್ಯಾಬ್​ನಲ್ಲಿ ವಿಡಿಯೋಗಳ ಅಸಲಿಯತ್ತಿನ ಪರಿಶೀಲನೆ ನಡೆಯಲಿದೆ. ಬಳಿಕವಷ್ಟೇ ಈ ಘಟನೆಯ ಅಸಲಿ ಸತ್ಯ ಹೊರ ಬೀಳಲಿದೆ. ಹಾಗಾದ್ರೆ FSL ತನಿಖೆ ನಡೆಯುವುದು ಹೇಗೆ? ಇದರಿಂದ ಅಸಲಿಯತ್ತು ಪತ್ತೆ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿರುವುದು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮುಜುಗರ ತಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್‌ ಅವರು ವಿಡಿಯೋವನ್ನು ಎಸ್‌ಎಫ್‌ಎಲ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಖಂಡಿತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದ್ದಾರೆ. ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಹೇಳಲಾಗುತ್ತಿರುವ ಮೂಲ ವಿಡಿಯೋಗಳನ್ನು ಎಫ್​ಎಸ್​ಎಲ್​ಗೆ ರವಾನಿಸಲಾಗಿದ್ದು ಸತ್ಯ ಅರಿಯಲು ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿದ್ದಾರೆ, ಮಾಧ್ಯಮಗಳ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡ್ತೀನಿ -ಬಿಕೆ ಹರಿಪ್ರಸಾದ್

ಎಫ್ಎಸ್ಎಲ್​ನಿಂದ ತನಿಖೆ ಹೇಗೆ ನಡೆಯಲಿದೆ?

ಎಫ್ಎಸ್ಎಲ್ ತನಿಖೆ ಬಗ್ಗೆ ಸೈಬರ್ ತಜ್ಞರು ಟಿವಿ9ಗೆ ಮಾಹಿತಿ ನೀಡಿದ್ದಾರೆ. ಆರ್ಟಿಫಿಷಲ್ ಇಂಟೆಲಿಜೆನ್ಸ್ (AI) ಮೂಲಕ ಪರಿಶೀಲನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮೂಲವಲ್ಲದ ವಿಡಿಯೋ ಅಥವಾ ಆಡಿಯೋಗೆ ಮಾನ್ಯತೆ ಇಲ್ಲ. ರೆಕಾರ್ಡ್ ಆದ ಡಿವೈಸ್​​​ನಿಂದ ವಿಡಿಯೋ, ಆಡಿಯೋ ಪಡೆದುಕೊಳ್ಳಬೇಕು. ಹೀಗಾಗಿ ಮದರ್ ವಿಡಿಯೋಗಳನ್ನು ಎಫ್​ಎಸ್​ಎಲ್ ತಂಡ ಸಂಗ್ರಹಿಸಲಿದೆ. ​​ಪೊಲೀಸರು ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾದ ಮೂಲ ವಿಡಿಯೋಗಳನ್ನು ಸಂಗ್ರಹಿಸಿ ಎಫ್​ಎಸ್​ಎಲ್​ಗೆ ಕಳಿಸಿದ್ದಾರೆ. ವಿಡಿಯೋ ಟ್ಯಾಂಪರ್ ಆಗಿದ್ಯಾ ಅಂತ FSL ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎನ್​​ಕ್ರಿಪ್ಟ್ ಮೂಲಕ ಹ್ಯಾಷಿಂಗ್ ಆಗಿದ್ಯಾ?ಇಲ್ವಾ? ಎಂಬ ಪರಿಶೀಲನೆ ನಡೆಯಲಿದೆ. ಆ ವಿಡಿಯೋ ನೈಜ ವಿಡಿಯೋನಾ ಎಂಬುದರ ಬಗ್ಗೆ FSL ಪರಿಶೀಲನೆ ನಡೆಸುತ್ತೆ.

ವಿಡಿಯೋ ಟ್ಯಾಂಪರಿಂಗ್ ಮಾಡಿದ್ರೆ ಪತ್ತೆ ಹಚ್ಚೋದು ಹೀಗೆ?

ಆ ವಿಡಿಯೋದಲ್ಲಿರುವ ವ್ಯಕ್ತಿ ಹಾಗೂ ಅದರ ಆಡಿಯೋ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಲಾಗುತ್ತೆ. ವಿಡಿಯೋ ಟ್ಯಾಂಪರಿಂಗ್ ಮಾಡಿದ್ರೆ ಅದರ ಲಿಪ್ ಸಿಂಕ್​ಗಳನ್ನು ಹೇಗೆ ಮಾಡಲಾಗಿದೆ ಎಂದು ಕಂಡು ಹಿಡಿಯಲಾಗುತ್ತೆ. FSLನಲ್ಲಿ AI ನಿಂದ ಮಾಡಿದ್ದಾ ಅನ್ನೋದನ್ನೂ ಸಹ ಪತ್ತೆ ಹಚ್ಚಲಾಗುತ್ತದೆ. ಆಡಿರೋ ಮಾತಿಗೂ, ಕೊಟ್ಟಿರುವ ರಿಯಾಕ್ಷನ್ ಪರಿಶೀಲನೆ ಮಾಡಲಾಗುತ್ತೆ. ಸ್ಲೋ ಡೌನ್ ಮಾಡುವ ಮೂಲಕ ಸೆಕೆಂಡ್​​ಗಳನ್ನು ಗಮನಿಸಲಾಗುತ್ತೆ. ಹಿಂದೆ ಬರುವಂತಹ ಆಡಿಯೋಗೂ, ವ್ಯಕ್ತಿ ಮಾತಿಗೂ ಸಾಮ್ಯತೆ ಹುಡುಕಲಾಗುತ್ತೆ. ಅದನ್ನು ಮತ್ತೆ ಹ್ಯಾಷಿಂಗ್ ತಂತ್ರಜ್ಞಾನ ಬಳಸಿ ಅದನ್ನ ಮತ್ತೆ ಪರಿಶೀಲಿಸಿ ಒರಿಜಿನಲ್ ಅಥವಾ ಫೇಕ್ ಎಂಬುದರ ಬಗ್ಗೆ FSL ರಿಪೋರ್ಟ್ ತಯಾರು ಮಾಡಲಾಗುತ್ತೆ. ಸದ್ಯ ವಿಡಿಯೋ, ಆಡಿಯೋ ಕ್ಲಿಪ್​ಗಳನ್ನು ಎಫ್​​​ಎಸ್​​ಎಲ್​ಗೆ ನೀಡಲಾಗಿದ್ದು ವರದಿ ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:16 pm, Thu, 29 February 24

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ