BBMP Budget: ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಿಸಲು ಚಿಂತನೆ; ಆನ್ಲೈನ್ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲ್ಯಾನ್
ಬಿಬಿಎಂಪಿ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ 2024-25 ಮಂಡನೆ ಮಾಡಿದ್ದು, ಹೊಸ ಜಾಹೀರಾತು ನೀತಿಯಿಂದ ಪಾಲಿಕೆ ಆದಾಯವನ್ನು 500 ಕೋಟಿ ರೂಪಾಯಿಯಷ್ಟು ಹೆಚ್ಚಿಸಿಕೊಳ್ಳಲು ಯೋಜಿಸಲಾಗಿದೆ. ಆನ್ಲೈನ್ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲಾನ್ ಮಾಡಲಾಗಿದೆ.
ಬೆಂಗಳೂರು, ಫೆ.29: ಬಿಬಿಎಂಪಿ (BBMP) ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ (BBMP Budegt) 2024-25 ಮಂಡನೆ ಮಾಡಿದ್ದು, ಹೊಸ ಜಾಹೀರಾತು ನೀತಿಯಿಂದ ಪಾಲಿಕೆ ಆದಾಯವನ್ನು 500 ಕೋಟಿ ರೂಪಾಯಿಯಷ್ಟು ಹೆಚ್ಚಿಸಿಕೊಳ್ಳಲು ಯೋಜಿಸಲಾಗಿದೆ. ಆನ್ಲೈನ್ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲಾನ್ ಮಾಡಲಾಗಿದೆ.
ಹೊಸ ಜಾಹೀರಾತು ನೀತಿಯಿಂದ 500 ಕೋಟಿ ಆದಾಯ ಹೆಚ್ಚಳವಾಗಿದ್ದು, ಆನ್ಲೈನ್ ಮೂಲಕ ಜಾಹೀರಾತು ಪರವಾನಗಿ ನೀಡಲು ಪ್ಲಾನ್ ಮಾಡಲಾಗಿದೆ. ಪಾಲಿಕೆಯ ಆಸ್ತಿ ನಿರ್ವಹಣೆ, ರಕ್ಷಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಪಾಲಿಕೆ ಸೇವೆಗಳು ಸುಗಮವಾಗಿ ತಲುಪಲು ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಪಾಲಿಕೆ ಭೂಮಿ, ಕ್ಯೂಆರ್ ಕೋಡ್, ರೋಡ್ ಹಿಸ್ಟರಿ, ಇಂದಿರಾ ಕ್ಯಾಂಟೀನ್ ಬಿಲ್, ಪಾಲಿಕೆ ಕೋರ್ಟ್ ಕೇಸ್, ಆಡಿಟ್ ಸೇರಿದಂತೆ ಎಲ್ಲದಕ್ಕೂ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ ಎಂದರು.
ಇದನ್ನೂ ಓದಿ: BBMP Budget: ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತಿಕರಣಕ್ಕೆ 200 ಕೋಟಿ
ಆಸ್ತಿಗಳು ಮತ್ತು ಮಾರುಕಟ್ಟೆ ವಿಭಾಗದಲ್ಲಿ ಪಾಲಿಕೆಯ ಆಸ್ತಿ ನಿರ್ವಹಣೆ, ರಕ್ಷಣೆಗೆ ಒತ್ತು ನೀಡಲಾಗಿದ್ದು, ಆದಾಯ ಕ್ರೂಢೀಕರಣಕ್ಕೆ ಬಾಡಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಟಿಟಿಆರ್ ವಿತರಣೆ ಸಂಪೂರ್ಣವಾಗಿ ಐಟಿ ಆಧಾರಿತವಾಗಿದ್ದು, ಆನ್ಲೈನ್ ಮೂಲಕ ಟಿಡಿಆರ್ ಲಾಗಿನ್, ಹಂಚಿಕೆ ಮಾಡಲಾಗುತ್ತಿದೆ ಎಂದರು. ಅಲ್ಲದೆ, ಇ-ಖಾತಾಗಳಿಗೆ ಐಟಿ ವ್ಯವಸ್ಥೆಯ FAR ಯೋಜನೆಯಿಂದ 1709 ಕೋಟಿ ಆದಾಯ ಬಂದಿದೆ ಎಂದರು.
ಸ್ವಚ್ಛ ಬೆಂಗಳೂರಿಗೆ ಒತ್ತು
ಬಜೆಟ್ನಲ್ಲಿ ಸ್ವಚ್ಛ ಬೆಂಗಳೂರಿಗೆ ಒತ್ತು ನೀಡಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ ಸಂಗ್ರಹ, ಸಾಗಣೆ ಮತ್ತು ಪ್ರಕ್ರಿಯೆಗೆ ಒತ್ತು ನೀಡುವ ಕೆಲಸವನ್ನು ಒಂದು ಏಜೆನ್ಸಿ ವಹಿಸಲಾಗುವುದು. ಪಾಲಿಕೆ ಮುಂದಿನ 25-30 ವರ್ಷಗಳವರೆಗೆ ತ್ಯಾಜ್ಯವನ್ನು ಸಂಸ್ಕರಿಸಲು ಪ್ರತಿ 50-100 ಎಕರೆಗಳ 4 ದಿಕ್ಕಿನಲ್ಲಿ ಜಮೀನು ಖರೀದಿಗೆ 100 ಕೋಟಿ ನಿಯೋಜನೆ ಮಾಡಲಾಗಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
ವರದಿ: ಶಾಂತಮೂರ್ತಿ, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Thu, 29 February 24