BBMP Budget: ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ಆರೋಗ್ಯ ಸೇವೆ ಉನ್ನತಿಕರಣಕ್ಕೆ 200 ಕೋಟಿ
ಬಿಬಿಎಂಪಿ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ 2024-25 ಮಂಡನೆ ಮಾಡಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಆರೋಗ್ಯಕರ ಬೆಂಗಳೂರು ಅಡಿಯಲ್ಲಿ ಆರೋಗ್ಯ ಸೇವೆ ಉನ್ನತಿಕರಿಸಲು ಎರಡು ವರ್ಷಗಳಿಗೆ 200 ಕೋಟಿ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ ಎಂದು ಘೋಷಿಸಲಾಗಿದೆ. ಹಾಗಾದರೆ, ಆರೋಗ್ಯ ಸೇವೆಗೆ ಬಜೆಟ್ನಲ್ಲಿ ಏನೇನು ಘೋಷಣೆ ಮಾಡಲಾಗಿದೆ? ಇಲ್ಲಿದೆ ಮಾಹಿತಿ.
ಬೆಂಗಳೂರು, ಫೆ.29: ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಅವರು ಬಿಬಿಎಂಪಿ ಬೆಜೆಟ್ (BBMP Budget) 2024-25 ಮಂಡನೆ ಮಾಡಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಆರೋಗ್ಯಕರ ಬೆಂಗಳೂರು ಅಡಿಯಲ್ಲಿ ಆರೋಗ್ಯ ಸೇವೆ ಉನ್ನತಿಕರಿಸಲು ಎರಡು ವರ್ಷಗಳಿಗೆ 200 ಕೋಟಿ ವೆಚ್ಚ ಭರಿಸಲು ಉದ್ದೇಶಿಸಲಾಗಿದೆ ಎಂದು ಘೋಷಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂಪಾಯಿ ವೆಚ್ಚ ಮೀಸಲಿರಿಸಲಾಗಿದೆ. ಹಾಗಾದರೆ, ಆರೋಗ್ಯ ಸೇವೆಗೆ ಬಜೆಟ್ನಲ್ಲಿ ಏನೇನು ಘೋಷಣೆ ಮಾಡಲಾಗಿದೆ? ಇಲ್ಲಿದೆ ಮಾಹಿತಿ.
ಬೆಂಗಳೂರು ಆರೋಗ್ಯ ಆಯುಕ್ತ ಹೊಸ ಹುದ್ದೆ ಸೃಷ್ಟಿಸಲು ಯೋಜಿಸಲಾಗಿದೆ. ಅಲ್ಲದೆ, ಪಾಲಿಕೆಯ 144 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 225 ನಮ್ಮ ಕ್ಲೀನಿಕ್, 27 ಹೆರಿಗೆ ಆಸ್ಪತ್ರೆ ಹಾಗೂ 7 ರೆಫರಲ್ ಯೂನಿಟ್ ನಿರ್ವಹಣೆಗೆ 20 ಕೋಟಿ ಮೀಸಲಿರಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಬಜೆಟ್: ಬೆಂಗಳೂರಿನ ನೂರು ಕಡೆ SHE TOILET, ಪೌರಕಾರ್ಮಿಕ ವಿಶ್ರಾಂತಿ ತಾಣಕ್ಕೆ 10 ಕೋಟಿ ರೂ, ಇನ್ನೂ ಏನೇನಿದೆ?
ಪಾಲಿಕೆ ಸೇವಾ ವಿತರಣೆ ಉನ್ನತೀಕರಿಸಲು ಸಮಗ್ರ ಸದೃಢ ಆರೋಗ್ಯ ಹೆಸರಿನಡಿ 3 ವರ್ಷಗಳಲ್ಲಿ ಸಮಗ್ರ ಯೋಜನೆ, 40 ಹೊಸ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಮತ್ತು 81 ಆರೋಗ್ಯ ಕೇಂದ್ರ ನವೀಕರಿಸಲು 64 ಕೋಟಿ, 24 ಹೆರಿಗೆ ಆಸ್ಪತ್ರೆ ಮತ್ತು ರೆಫೆರಲ್ ಘಟಕಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಿಸಲು 24 ಕೋಟಿ, 14 ಆತ್ಯಾಧುನಿಕ ಜೀವ ರಕ್ಷಕ ಆಂಬುಲೆನ್ಸ್ ಖರೀದಿಗೆ 25 ಕೋಟಿ ಮೀಸಲಿರಿಸಲಾಗಿದೆ.
ನೂತನ ಇಂದಿರಾ ಕ್ಯಾಂಟಿನ್ಗೆ ಒತ್ತು, ಮೊಬೈಲ್ ಕ್ಯಾಂಟಿನ್ ಸ್ಥಾಪನೆ
ಪಾಲಿಕೆ ದಕ್ಷಿಣ ವಲಯದ ಪಬ್ಬತಿ ಹೆರಿಗೆ ಆಸ್ಪತ್ರೆ ಬಳಿ ದಿನಗೂಲಿ ಕಾರ್ಮಿಕರ ವಿಶೇಷ ಚೇತನ ಮಕ್ಕಳಿಗೆ 1 ಕೋಟಿ ವೆಚ್ಚದಲ್ಲಿ ಆರೈಕೆ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದ ಶಿವಾನಂದ ಕಲಕೇರಿ, ನೂತನ 50 ಇಂದಿರಾ ಕ್ಯಾಂಟಿನ್ಗೆ ಒತ್ತು, ಸ್ಥಿರ ಕ್ಯಾಂಟಿನ್ ಅಥವಾ ಮೊಬೈಲ್ ಕ್ಯಾಂಟಿನ್ ಸ್ಥಾಪಿಸಲು 70 ಕೋಟಿ ಮೀಸಲಿರಿಸಲಾಗಿದೆ ಎಂದು ಘೋಷಿಸಿದರು.
ಕಸಾಯಿಖಾನೆ ನಿರ್ಮಾಣಕ್ಕೆ ಅನುದಾನ
ಹೊಸ ರುದ್ರ ಭೂಮಿ ಹಾಗೂ ಚಿತಾಗಾರ ನಿರ್ಮಾಣ, ಉನ್ನತೀಕರಿಸಲು 15 ಕೋಟಿ ರೂಪಾಯಿ ಹಾಗೂ ಮಾಂಸ ಪೂರೈಕೆ ಮಾಡಲು 2 ವಲಯಗಳಲ್ಲಿ 4 ಕಸಾಯಿಖಾನೆ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ವರದಿ: ಶಾಂತಮೂರ್ತಿ, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Thu, 29 February 24