ಯಶ್-ರಾಧಿಕಾ ಪಂಡಿತ್ ಸರಳತೆ ಸಾಕ್ಷಿ ಈ ಚಿತ್ರಗಳು
Yash-Radhika: ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್, ಅವರ ಮೇಲೆ ನೂರಾರು-ಸಾವಿರಾರು ಕೋಟಿ ಬಂಡವಾಳ ಸುರಿಯಲು ನಿರ್ಮಾಪಕರು ರೆಡಿಯಾಗಿದ್ದಾರೆ. ಆದರೆ ಯಶ್ ಮಾತ್ರ ತಮ್ಮ ಸರಳತೆಯಿಂದ ಗಮನ ಸೆಳೆದಿದ್ದಾರೆ.
Updated on: Feb 17, 2024 | 11:26 PM

ನಟ ಯಶ್ ಈಗ ಪ್ಯಾನ್ ಇಂಡಿಯಾ ನಟ ಅವರೊಟ್ಟಿಗೆ ಸಿನಿಮಾ ಮಾಡಲು ಬಾಲಿವುಡ್ನ ದೊಡ್ಡ ನಿರ್ಮಾಪಕರು ಸಾಲುಗಟ್ಟಿದ್ದಾರೆ.

ಯಶ್ ಈಗಾಗಲೇ ಹೊಸ ಸಿನಿಮಾ ಘೋಷಣೆ ಮಾಡಿದ್ದು ಹಾಲಿವುಡ್ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಮಾಡಲು ಸಿದ್ಧರಾಗಿದ್ದಾರೆ.

ಯಶ್ ಅನ್ನು ನಂಬಿ ನೂರಾರು, ಸಾವಿರಾರು ಕೋಟಿ ಹಣವನ್ನು ಸುರಿಯಲು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಯಶ್ ಮಾತ್ರ ತಮ್ಮ ಸರಳತೆಯಿಂದ ಸೆಳೆಯುತ್ತಿದ್ದಾರೆ.

ನಟ ಯಶ್ ತಮ್ಮ ಕುಟುಂಬದೊಟ್ಟಿಗೆ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ್ದರು. ಒಂದು ದಿನ ಮಠದಲ್ಲಿಯೇ ಉಳಿದುಕೊಂಡಿದ್ದರು.

ಈ ವೇಳೆ ಮಕ್ಕಳಿಗಾಗಿ ಸಾಮಾನ್ಯ ಅಂಗಡಿಯಲ್ಲಿ ಚಾಕಲೇಟ್ ಕೊಡಿಸಿದರು. ಮಾತ್ರವಲ್ಲದೆ ಪತ್ನಿ ರಾಧಿಕಾ ಪಂಡಿತ್ಗೆ ಐಸ್ಕ್ಯಾಂಡಿ ಸಹ ಕೊಡಿಸಿದ್ದಾರೆ.

ಯಶ್, ಮಗಳಿಗಾಗಿ ಅಂಗಡಿಯಲ್ಲಿ ಚಾಕಲೇಟ್ ಖರೀದಿಸುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ. ಅದೇ ಚಿತ್ರದಲ್ಲಿ ರಾಧಿಕಾ ಪಂಡಿತ್ ಐಸ್ ಕ್ಯಾಂಡ್ ತಿನ್ನುತ್ತಿದ್ದಾರೆ.

ಮಠದಿಂದ ಹೊರಡುವಾಗ ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಯಶ್ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.




