ಮೈಸೂರಿನ ಮೈಮುಲ್‌ ಚುನಾವಣೆಯಲ್ಲಿ ಹೆಚ್‌ ಡಿ ಕುಮಾರಸ್ವಾಮಿಗೆ ಭಾರೀ ಮುಖಭಂಗ

ಸಾಧು ಶ್ರೀನಾಥ್​
|

Updated on: Mar 18, 2021 | 3:31 PM

ಮೈಸೂರಿನಲ್ಲಿ ಸ್ಥಳೀಯ ಚುನಾವಣೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತಿವೆ. ಹಾಗೇನೆ ರಾಜ್ಯ ನಾಯಕರ ಹಾಗೂ ಸ್ಥಳೀಯ ಮುಖಂಡರ ನಡುವೆ ಜಟಾಪಟಿಗೆ ಕಾರಣವಾಗ್ತಿವೆ. ಮೈಸೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಗೆ ಸಂಬಂಧಿಸಿದಂತೆ ಜಿಟಿ ದೇವೇಗೌಡ ಅವರನ್ನ ಮುಗಿಸಲು ಹೋಗಿ ಸ್ವತಃ ಕುಮಾರಸ್ವಾಮಿಯೇ ಮಣ್ಣುಮುಕ್ಕಿದ್ದಾರೆ… ಮಾತಿನ ಚಕಮಕಿ, ಕೈ ಕೈ ಮಿಲಾಯಿಸುವ ಹಂತ ತಲುಪಿದ ಗಲಾಟೆ. ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸುತ್ತಿರುವ ಪೊಲೀಸರು. ಇದು ಮೈಸೂರಿನ ಆಲನಹಳ್ಳಿ ಮೆಗಾ ಡೈರಿ ಆವರಣದಲ್ಲಿ ನಡೆದ ಮೈ ಮುಲ್ ನಿರ್ದೇಶಕರ ಚುನಾವಣೆಯಲ್ಲಿ […]

ಮೈಸೂರಿನಲ್ಲಿ ಸ್ಥಳೀಯ ಚುನಾವಣೆಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತಿವೆ. ಹಾಗೇನೆ ರಾಜ್ಯ ನಾಯಕರ ಹಾಗೂ ಸ್ಥಳೀಯ ಮುಖಂಡರ ನಡುವೆ ಜಟಾಪಟಿಗೆ ಕಾರಣವಾಗ್ತಿವೆ. ಮೈಸೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಗೆ ಸಂಬಂಧಿಸಿದಂತೆ ಜಿಟಿ ದೇವೇಗೌಡ ಅವರನ್ನ ಮುಗಿಸಲು ಹೋಗಿ ಸ್ವತಃ ಕುಮಾರಸ್ವಾಮಿಯೇ ಮಣ್ಣುಮುಕ್ಕಿದ್ದಾರೆ…

ಮಾತಿನ ಚಕಮಕಿ, ಕೈ ಕೈ ಮಿಲಾಯಿಸುವ ಹಂತ ತಲುಪಿದ ಗಲಾಟೆ. ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸುತ್ತಿರುವ ಪೊಲೀಸರು. ಇದು ಮೈಸೂರಿನ ಆಲನಹಳ್ಳಿ ಮೆಗಾ ಡೈರಿ ಆವರಣದಲ್ಲಿ ನಡೆದ ಮೈ ಮುಲ್ ನಿರ್ದೇಶಕರ ಚುನಾವಣೆಯಲ್ಲಿ ಕಂಡು ಬಂದ ಝಲಕ್. ಹೌದು ಈ ಬಾರಿಯ ಮೈಮುಲ್ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿತ್ತು.

ಇದಕ್ಕೆ ಕಾರಣ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡರ‌ ನಡುವಿನ ಜಿದ್ದಾಜಿದ್ದಿನ ಹಣಾಹಣಿ. ಈ ಬಾರಿ ಮೈ ಮುಲ್ ಚುನಾವಣೆ ಹೆಚ್‌ಡಿಕೆ ವರ್ಸಸ್ ಜಿಟಿಡಿ ಅನ್ನೋ ರೇಂಜ್‌ಗೆ ಹೋಗಿತ್ತು.