ಟೊಮ್ಯಾಟೋ ಬೆಲೆ ಕುಸಿತ, ಬೆಳೆದು ನಿಂತ ಫಸಲನ್ನು ನಾಶ ಮಾಡಿದ ಕೋಲಾರ ರೈತ
ಬೆಲೆ (price) ಕುಸಿದಿರುವ ಕಾರಣಕ್ಕೆ ಎರಡೂವರೆ ಎಕರೆ ತೋಟದಲ್ಲಿ ಬೆಳೆದ ಟೊಮ್ಯಾಟೋ ರೈತ ಫಸಲನ್ನು ನಾಶಮಾಡುತ್ತಿದ್ದಾರೆ. ಟೊಮ್ಯಾಟೋಗೆ ಬೆಂಬಲ ಬೆಲೆ ಪ್ರಕಟಿಸಿ ಅಂತ ರೈತರು ಆಗ್ರಹಿಸುತ್ತಲೇ ಇದ್ದಾರೆ.
ಕೋಲಾರ (Kolar) ಜಿಲ್ಲೆಯ ಟೊಮ್ಯಾಟೋ ಬೆಳೆಗಾರರು ಪ್ರತಿವರ್ಷ ಸಂಕಷ್ಟಕ್ಕೀಡಾಗುತ್ತಾರೆ. ಬೆಳೆ ಸಮೃದ್ಧವಾಗಿ ಬೆಳೆದು ಫಸಲಿಗೆ ಬಂದಾಗ ಅದರ ಬೆಲೆ ದಿಢೀರನೆ ಕುಸಿದು ಬಿಡುತ್ತದೆ. ಜಿಲ್ಲೆಯ ಮಟ್ಟಹಳ್ಳಿಯಲ್ಲಿ ಶ್ರೀನಿವಾಸ ಗೌಡ (Srinivas Gowda) ಹೆಸರಿನ ಬೆಳೆಗಾರರು ಬೆಲೆ (price) ಕುಸಿದಿರುವ ಕಾರಣಕ್ಕೆ ಎರಡೂವರೆ ಎಕರೆ ತೋಟದಲ್ಲಿ ಬೆಳೆದ ಟೊಮ್ಯಾಟೋ ಫಸಲನ್ನು ನಾಶಮಾಡುತ್ತಿದ್ದಾರೆ. ಟೊಮ್ಯಾಟೋಗೆ ಬೆಂಬಲ ಬೆಲೆ ಪ್ರಕಟಿಸಿ ಅಂತ ರೈತರು ಆಗ್ರಹಿಸುತ್ತಲೇ ಇದ್ದಾರೆ.
Published on: Jul 20, 2022 11:20 AM