‘ವ್ಯಕ್ತಿ ಪೂಜೆ ಬೇಡ, ಸಿನಿಮಾಗೆ ಮರ್ಯಾದೆ ಕೊಡಿ’: ವೇದಿಕೆ ಮೇಲೆ ಖಡಕ್ ಮಾತಾಡಿದ ಉಮಾಪತಿ
Umapathy Srinivas Gowda: ‘ಒಬ್ಬ ವ್ಯಕ್ತಿಯನ್ನು ಪೂಜೆ ಮಾಡಿದರೆ ಆ ವ್ಯಕ್ತಿ ಸ್ಟಾರ್ ಆಗಿರುವವರೆಗೆ ಮಾತ್ರ ನೀವು ಇರುತ್ತೀರಿ. ಅದಾದ ನಂತರ ನೀವೂ ತೆರೆ ಮರೆಗೆ ಸರಿಯುತ್ತೀರಿ’ ಎಂದು ಉಮಾಪತಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಅವರು ನೇರ ನಡೆ-ನುಡಿಯ ವ್ಯಕ್ತಿ. ಚಿತ್ರರಂಗದಲ್ಲಿ ನಿರ್ಮಾಪಕರ ಕಷ್ಟಗಳ ಬಗ್ಗೆ ಅವರು ಮಾತನಾಡಿದ್ದಾರೆ. ‘ಮದಗಜ’ (Madhagaja), ‘ರಾಬರ್ಟ್’ ಸಿನಿಮಾಗಳನ್ನು ನಿರ್ಮಿಸಿದ ಅನುಭವ ಉಮಾಪತಿ ಅವರಿಗೆ ಇದೆ. ಸುದ್ದಿಗೋಷ್ಠಿಯೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅವರು ಕನ್ನಡ ಚಿತ್ರರಂಗದ (Kannada Film Industry) ಕುರಿತು ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ವ್ಯಕ್ತಿ ಪೂಜೆ ಬೇಡ, ಸಿನಿಮಾಗೆ ಮರ್ಯಾದೆ ಕೊಡಿ’ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ‘ಒಬ್ಬ ವ್ಯಕ್ತಿಯನ್ನು ಪೂಜೆ ಮಾಡಿದರೆ ಆ ವ್ಯಕ್ತಿ ಸ್ಟಾರ್ ಆಗಿರುವವರೆಗೆ ಮಾತ್ರ ನೀವು ಇರುತ್ತೀರಿ. ಅದಾದ ನಂತರ ನೀವೂ ತೆರೆ ಮರೆಗೆ ಸರಿಯುತ್ತೀರಿ. ಅದರ ಬದಲು ಸಿನಿಮಾವನ್ನು ಆರಾಧಿಸಿ’ ಎಂದು ಕಿವಿಮಾತು ಹೇಳಿದ್ದಾರೆ.
Published on: Jul 20, 2022 01:10 PM
Latest Videos