ಒಂದು ಬಾರಿ ನಾಯಿ ಕಚ್ಚಿಕೊಂಡು ಹೋಗಿದ್ದ ಚಿರತೆ; ಮತ್ತೊಮ್ಮೆ ಎಂಟ್ರಿಕೊಟ್ಟು ಏನೂ ಸಿಗದೇ ತೆರಳಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 01, 2023 | 12:07 PM

ಜಿಲ್ಲೆಯ ಶಿರಸಿಯಲ್ಲಿ ಇತ್ತೀಚಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು, ತಾಲೂಕಿನ ತಲ್ಲಿನಮನೆಯಲ್ಲಿ ಚಿರತೆಯೊಂದು, ಒಂದು ಬಾರಿ ನಾಯಿಯನ್ನು ಕಚ್ಚಿಕೊಂಡು ಹೋಗಿ, ಮತ್ತೊಂದು ಬಾರಿ ಅದೇ ಮನೆಗೆ ಬಂದು ಏನೂ ಸಿಗದೇ ನಿರಾಸೆಯಿಂದ ಮರಳಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.

ಉತ್ತರ ಕನ್ನಡ: ರಾಜ್ಯದ ಹಲವೆಡೆ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ. ಅದರಂತೆ ಜಿಲ್ಲೆಯ ಶಿರಸಿ(Sirsi)ಯಲ್ಲಿ ಇತ್ತೀಚಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು, ತಾಲೂಕಿನ ತಲ್ಲಿನಮನೆಯಲ್ಲಿ ಚಿರತೆಯೊಂದು, ಒಂದು ಬಾರಿ ನಾಯಿಯನ್ನು ಕಚ್ಚಿಕೊಂಡು ಹೋಗಿ, ಮತ್ತೊಂದು ಬಾರಿ ಅದೇ ಮನೆಗೆ ಬಂದು ಏನೂ ಸಿಗದೇ ನಿರಾಸೆಯಿಂದ ಮರಳಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಶಿರಸಿಯ ಹುಲೇಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಲ್ಲಿನಮನೆಯ ರಾಮಕೃಷ್ಣ ‌ಹೆಗಡೆ ಎಂಬವರ ಮನೆಗೆ ಚಿರತೆ ಬಂದು ಮನೆಯ ಬಾಗಿಲಿನಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿತ್ತು.

ಇದಾದ ಕೆಲವು ದಿನಗಳ ಬಳಿಕ ಪುನಃ ಅದೇ ಚಿರತೆ ನಾಯಿ ಹುಡುಕಿಕೊಂಡು ಅದೇ ಮನೆಗೆ ವಾಪಾಸ್ ಬಂದಿದೆ. ‌ಆದರೆ, ನಾಯಿ ಸಿಗದ ಕಾರಣ ಮನೆ ಬಾಗಿಲಿನಲ್ಲಿ ಅತ್ತಿತ್ತ ಹುಡುಕಾಟ ನಡೆಸಿದ್ದು, ನಿರಾಸೆಯಿಂದ ತೆರಳಿದೆ. ಇದೆಲ್ಲವೂ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಘಟನೆಯಿಂದ ಮನೆಯವರೂ ಸೇರಿದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚು ಮಾಡಿದೆ. ತಲ್ಲಿನಮನೆಯ ದಾರಿಯಲ್ಲಿ ಶಾಲಾ ಮಕ್ಕಳು ಕೂಡ ಓಡಾಡುತ್ತಿದ್ದು, ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ