COSTLY ಟೋಲ್ ಕಾಸ್ಟ್​! ಇಂದಿನಿಂದ ಮಂಡ್ಯ ವ್ಯಾಪ್ತಿಯ ಬೆಂ-ಮೈ ಎಕ್ಸ್​​​ಪ್ರೆಸ್​​ ಹೈವೇ ಟೋಲ್ ಸಂಗ್ರಹ ಆರಂಭ; ಬೆಚ್ಚಿ ಬೀಳಿಸಿದೆ ಟೋಲ್‌ ಶುಲ್ಕ!

COSTLY ಟೋಲ್ ಕಾಸ್ಟ್​! ಇಂದಿನಿಂದ ಮಂಡ್ಯ ವ್ಯಾಪ್ತಿಯ ಬೆಂ-ಮೈ ಎಕ್ಸ್​​​ಪ್ರೆಸ್​​ ಹೈವೇ ಟೋಲ್ ಸಂಗ್ರಹ ಆರಂಭ; ಬೆಚ್ಚಿ ಬೀಳಿಸಿದೆ ಟೋಲ್‌ ಶುಲ್ಕ!

ಸಾಧು ಶ್ರೀನಾಥ್​
|

Updated on: Jul 01, 2023 | 11:11 AM

ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾದಲ್ಲಿ 55.13 ಕಿಮೀ ವ್ಯಾಪ್ತಿಗೆ ಟೋಲ್ ಬೀಳಲಿದೆ. ಟೋಲ್‌ ಶುಲ್ಕ ದುಬಾರಿಯಾಗಿದ್ದು ಬೆಚ್ಚಿ ಬೀಳಿಸಿದೆ!

ಮಂಡ್ಯ: ಇಂದಿನಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ 8 ಗಂಟೆಯಿಂದ ಆರಂಭಗೊಂಡಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾದಲ್ಲಿ 55.13 ಕಿಮೀ ವ್ಯಾಪ್ತಿಗೆ ಟೋಲ್ ಬೀಳಲಿದೆ. ಟೋಲ್‌ ಶುಲ್ಕ ದುಬಾರಿಯಾಗಿದ್ದು ಬೆಚ್ಚಿ ಬೀಳಿಸಿದೆ! ಟೋಲ್ ಶುಲ್ಕ ಕೇಳಿದ್ರೆ ಬೆಂಗಳೂರು-ಮೈಸೂರು ಯಾಕ್ ಹೋಗಬೇಕು ಅಂದುಕೊಳ್ಳೋದು ಗ್ಯಾರಂಟಿಯಾಗಿದೆ.

ಟೋಲ್ ಶುಲ್ಕ ವಿವರ ಹೀಗಿದೆ ನೋಡಿಕೊಂಡು ಸಂಚರಿಸಿ:

ಏಕಮುಖ ಸಂಚಾರ:

ಕಾರು, ಜೀಪು, ವ್ಯಾನು – 155 ರೂ
ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 250 ರೂ
ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 525 ರೂ
ಮೂರು ಆಕ್ಸಲ್ ವಾಣಿಜ್ಯ ವಾಹನ – 575 ರೂ

ಭಾರಿ ನಿರ್ಮಾಣ ಯಂತ್ರಗಳು / ಭೂ ಅಗೆತದ ಸಾಧನಗಳು / ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – 825 ರೂ

ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1005 ರೂ

ಅದೇ ದಿನ ವಾಪಸ್ಸು:

ಕಾರು, ಜೀಪು, ವ್ಯಾನು – 235 ರೂ

ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ/ಮಿನಿ ಬಸ್ – 375 ರೂ

ಟ್ರಕ್/ಬಸ್ (ಎರಡು ಆಕ್ಸಲ್ ಗಳದ್ದು) 790 ರೂ