ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆಯೇ ಕೈಕೊಟ್ಟ ಪ್ರಿಯಕರ..!

Edited By:

Updated on: Jul 07, 2025 | 10:19 PM

ಗಂಡನನನ್ನು ಬಿಟ್ಟು ಆತನ ಸ್ನೇಹಿತ ಲವ್ ಬಲೆಗೆ ಬಿದ್ದಿದ್ದ ವಿವಾಹಿತ ಮಹಿಳೆ ಇದೀಗ ಬೀದಿಪಾಲಾಗಿದ್ದಾಳೆ. ಅತ್ತ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಸಹ ಕೈಕೊಟ್ಟಿದ್ದಾನೆ. ಇದರಿಂದ ಮಹಿಳೆ ಕಂಗಾಲಾಗಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಗಂಡನ ಸ್ನೇಹಿತ ಪ್ರಿಯಕ ಮನೆ ಮುಂದೆ ಪ್ರತಿಭಟನೆ ಕುಳಿತ್ತಿದ್ದಾಳೆ.

ಕೋಲಾರ, (ಜುಲೈ 07): ಗಂಡನನನ್ನು ಬಿಟ್ಟು ಆತನ ಸ್ನೇಹಿತ ಲವ್ ಬಲೆಗೆ ಬಿದ್ದಿದ್ದ ವಿವಾಹಿತ ಮಹಿಳೆ ಇದೀಗ ಬೀದಿಪಾಲಾಗಿದ್ದಾಳೆ. ಅತ್ತ ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಸಹ ಕೈಕೊಟ್ಟಿದ್ದಾನೆ. ಇದರಿಂದ ಮಹಿಳೆ ಕಂಗಾಲಾಗಿದ್ದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಗಂಡನ ಸ್ನೇಹಿತ ಪ್ರಿಯಕ ಮನೆ ಮುಂದೆ ಪ್ರತಿಭಟನೆ ಕುಳಿತ್ತಿದ್ದಾಳೆ. ಬೆಂಗಳೂರಿನಲ್ಲಿ ಇರುವಾಗ ಪತಿ ಹರೀಶ್​​ ಸ್ನೇಹಿತ ಅಮರನಾಥ್​ ನ ಪರಿಚಯವಾಗಿದ್ದು, ಬಳಿಕ ಆತನೊಂದಿಗೆ ಸ್ನೇಹ ಬೆಳೆದಿದೆ. ನಂತರ ಅದು ಪ್ರೀತಿಗೆ ತಿರುಗಿದ್ದು, ಮದುವೆ ಮಾಡಿಕೊಳ್ಳುವುದಾಗಿ ಅಮರನಾಥ್ ಹೇಳಿದ್ದಾನೆ. ಇದನ್ನೇ ನಂಬಿದ ಸಂಯುಕ್ತಾ ಗಂಡನ ಸ್ನೇಹಿತ ಅಮರನಾಥನ ಜೊತೆ ಬಂದಿದ್ದಾಳೆ. ಅಮರನಾಥ್ ಹಾಗೂ ಸಂಯುಕ್ತ ಕಳೆದ 3 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇದೀಗ ಸಂಯುಕ್ತಾ ಐದು ತಿಂಗಳು ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆಯೇ ಪ್ರಿಯಕರ ಅಮರನಾಥ್ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಕಂಗಾಲಾದ ಸಂಯುಕ್ತ, ನ್ಯಾಯಾಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ ನಡೆಸಿದ್ದಾಳೆ.