ಅಟ್ಯಾಕ್‌ ಮಾಡಲು ಮುಂದಾದ ಕರಡಿ; ಕೂದಲೆಳೆ ಅಂತರದಲ್ಲಿ ಬಜಾವ್‌ ಆದ ವ್ಯಕ್ತಿ

Updated on: Sep 25, 2025 | 12:25 PM

ಕಾಡು ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ನಡೆಸುವಂತಹ ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ದೃಶ್ಯ ವೈರಲ್‌ ಆಗಿದ್ದು, ಕಾಡಿನಿಂದ ನಾಡಿತ್ತ ಆಹಾರ ಅರಸುತ್ತಾ ಬಂದಂತಹ ಕರಡಿಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಲು ಮುಂದಾಗಿದ್ದು, ಅವರು ತಮ್ಮ ಸಮಯ ಪ್ರಜ್ಞೆಯಿಂದ ಕಾರಿನೊಳಗೆ ಹೋಗಿ ಕೂರುವ ಮೂಲಕ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಬಚಾಬ್‌ ಆಗಿದ್ದಾರೆ.

ಕಾಡಿನಿಂದ ನಾಡಿಗೆ ಆಹಾರವನ್ನು ಅರಸುತ್ತಾ ಬರುವ ಕಾಡು ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ನಡೆಸುವಂತಹ ಘಟನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ರಷ್ಯಾದಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕಾಡು ಕರಡಿಯೊಂದು (bear attack) ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಲು ಮುಂದಾಗಿದೆ. ಕರಡಿ ಅಟ್ಯಾಕ್‌ ಮಾಡಲು ಮುಂದಾದಾಗ, ಆ ವ್ಯಕ್ತಿ ತಮ್ಮ ಸಮಯ ಪ್ರಜ್ಞೆಯಿಂದ ಥಟ್ಟನೆ ಹೋಗಿ ಕಾರ್‌ ಒಳಗೆ ಕುಳಿತುಕೊಂಡಿದ್ದಾರೆ. ಹೀಗೆ ಆ ವ್ಯಕ್ತಿ ಕೂದಲೆಳೆ ಅಂತರದಲ್ಲಿ ಕರಡಿ ದಾಳಿಯಿಂದ ಪಾರಾಗಿದ್ದು, ಎದೆ ಝಲ್‌ ಎನಿಸುವ ಈ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ