ಬೆಂಗಳೂರಿನಲ್ಲಿ ಹಾಡಹಗಲೇ 7.11 ಕೋಟಿ ರೂ.ದರೋಡೆ, ಪ್ರತ್ಯಕ್ಷದರ್ಶಿ ಹೇಳಿದ್ದೇನು?

Updated on: Nov 19, 2025 | 5:07 PM

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಹಣ ದರೋಡೆ ನಡೆದಿದ್ದು, ಈ ದರೋಡೆಯಿಂದ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಸುಮಾರು 7 ಕೋಟಿ 11 ಲಕ್ಷ ರೂಪಾಯಿ ಹಣ ಇದ್ದ ವಾಹನವನ್ನು ದೋಚಿಕೊಂಡು, ಅಶೋಕ್ ಪಿಲ್ಲರ್ ಬಳಿ ಹೈಜಾಕ್ ಮಾಡಿದ್ದು, ಬಳಿಕ ಹಣವಿದ್ದ ವಾಹನವನ್ನು ಜಯದೇವ ಡೈರಿ ಸರ್ಕಲ್​​​ ಫ್ಲೈಓವರ್ ಬಳಿ ನಿಲ್ಲಿಸಿದ್ದಾರೆ. ನಂತರ ದರೋಡೆಕೋರರು ಹಣವನ್ನು ತಮ್ಮ ಇನ್ನೋವಾ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚುಗಾರರ, ಪೊಲೀಸರರು ದೌಡಾಯಿಸಿ ತನಿಖೆ ನಡೆಸಿದ್ದಾರೆ. ಇನ್ನು ಈ ದರೋಡೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿರುವುದನ್ನು ಕೇಳಿ.

ಬೆಂಗಳೂರು, (ನವೆಂಬರ್ 19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ಬಹುದೊಡ್ಡ ದರೋಡೆ ಪ್ರಕರಣ ನಡೆದಿದೆ. ಸಿಎಂಎಸ್ ಕಂಪನಿಯ ವ್ಯಾನ್ ಅಡ್ಡಗಟ್ಟಿ ಹಣ ದರೋಡೆ ನಡೆದಿದ್ದು, ಈ ದರೋಡೆಯಿಂದ ನಗರದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಸುಮಾರು 7 ಕೋಟಿ 11 ಲಕ್ಷ ರೂಪಾಯಿ ಹಣ ಇದ್ದ ವಾಹನವನ್ನು ದೋಚಿಕೊಂಡು, ಅಶೋಕ್ ಪಿಲ್ಲರ್ ಬಳಿ ಹೈಜಾಕ್ ಮಾಡಿದ್ದು, ಬಳಿಕ ಹಣವಿದ್ದ ವಾಹನವನ್ನು ಜಯದೇವ ಡೈರಿ ಸರ್ಕಲ್​​​ ಫ್ಲೈಓವರ್ ಬಳಿ ನಿಲ್ಲಿಸಿದ್ದಾರೆ. ನಂತರ ದರೋಡೆಕೋರರು ಹಣವನ್ನು ತಮ್ಮ ಇನ್ನೋವಾ ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚುಗಾರರ, ಪೊಲೀಸರರು ದೌಡಾಯಿಸಿ ತನಿಖೆ ನಡೆಸಿದ್ದಾರೆ. ಇನ್ನು ಈ ದರೋಡೆ ಬಗ್ಗೆ ಪ್ರತ್ಯಕ್ಷದರ್ಶಿ ಹೇಳಿರುವುದನ್ನು ಕೇಳಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅತಿದೊಡ್ಡ ಕಳ್ಳತನ: ಹಾಡಹಗಲೇ ATM ವಾಹನ ಹೈಜಾಕ್, 7.11 ಕೋಟಿ ರೂ. ದರೋಡೆ

Published on: Nov 19, 2025 05:07 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More