ಕೊಪ್ಪಳದಲ್ಲಿ ಕೊರೊನಾ ಲಸಿಕೆ ನೀಡಲು ಹೊಗುತ್ತಿದ್ದಂತೆ ಮೈ ಮೇಲೆ ದೇವರು ಬಂದಂತೆ ವರ್ತಿಸಿದ ವ್ಯಕ್ತಿ; ವಿಡಿಯೋ ವೈರಲ್

| Updated By: sandhya thejappa

Updated on: Nov 28, 2021 | 11:05 AM

ಗ್ರಾಮೀಣ ಜನರ ಈ ವರ್ತನೆಯಿಂದ ಆ ಆ ಭಾಗದ ಆರೋಗ್ಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಕೊಪ್ಪಳದಲ್ಲಿ ಲಸಿಕೆ ಹಾಕಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಲಸಿಕೆ ಹಾಕಲು ಹೋದಾಗ ವ್ಯಕ್ತಿಯೊಬ್ಬರು ಮೈ ಮೇಲೆ ದೇವರು ಬಂದಂತೆ ವರ್ತಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಇರುವ ಏಕೈಕ ಅಸ್ತ್ರವೆಂದರೆ ಲಸಿಕೆ ಮಾತ್ರ. ಈ ಬಗ್ಗೆ ಜಾಗೃತಿ ಮೂಡಿಸಿದರೂ ಕೆಲ ಜನರು ಮಾತ್ರ ಲಸಿಕೆ ಪಡೆಯಲು ನಿರ್ಲಕ್ಷ್ಯ ತೋರುತ್ತಾರೆ. ಲಸಿಕೆ ಪಡೆಯಲ್ಲ, ಬೇಕಾದರೆ ಇಂದೇ ಸಾಯಲಿ ಅಂತ ಹಠ ಹಿಡಿಯುತ್ತಾರೆ. ಗ್ರಾಮೀಣ ಜನರ ಈ ವರ್ತನೆಯಿಂದ ಆ ಆ ಭಾಗದ ಆರೋಗ್ಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಕೊಪ್ಪಳದಲ್ಲಿ ಲಸಿಕೆ ಹಾಕಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಲಸಿಕೆ ಹಾಕಲು ಹೋದಾಗ ವ್ಯಕ್ತಿಯೊಬ್ಬರು ಮೈ ಮೇಲೆ ದೇವರು ಬಂದಂತೆ ವರ್ತಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪುರದಲ್ಲಿ ಈ ಘಟನೆ ನಡೆದಿದೆ. ಆರೋಗ್ಯ ಕೇಂದ್ರದ ಸಿಬ್ಬಂದಿ ಲಸಿಕೆ ಹಾಕಲು ಹೋದಾಗ ದೇವರು ಬಂದಂತೆ ವರ್ತಿಸಿದ್ದಾರೆ. ಲಸಿಕಾ ಸಿಬ್ಬಂದಿಗಳು ಮನೆ ಬಳಿ ಹೋಗುತ್ತಿದ್ದಂತೆ ಕುದುರೆ, ಕುದುರೆ ಬೇಕು ಅಂತ ವಿಲಕ್ಷಣ ವರ್ತನೆ ತೋರಿದ್ದಾರೆ. ರಾಮಣ್ಣ ಯಲಬುರ್ತಿ ವಿಲಕ್ಷಣವಾಗಿ ವರ್ತಿಸಿದ ವ್ಯಕ್ತಿ. ಆರೋಗ್ಯ ಇಲಾಖೆ ಲಸಿಕೆ ಹಾಕಿಸಿಕೊಳ್ಳುವಂತೆ ಎಷ್ಟೇ ಮನವೊಲಿಸಲು ಯತ್ನಿಸಿದರೂ ವಿಫಲವಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.