ಬೇರೆಯವರಲ್ಲಿ ತಪ್ಪು ಹುಡುಕುವ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಅನ್ನುತ್ತಾರೆ ಡಾ ಸೌಜನ್ಯ ವಶಿಷ್ಠ
ನಮ್ಮಲ್ಲಿರುವ ಒಂದು ದೌರ್ಬಲ್ಯ ಅಥವಾ ನ್ಯೂನತೆಯನ್ನು ಮುಚ್ಚಿಟ್ಟುಕೊಳ್ಳವುದಕ್ಕಾಗಿ ನಾವು ಬೇರೆಯವರಲ್ಲಿ ತಪ್ಪು ಹುಡುಕುತ್ತೇವೆ.
ನಾವು ಪ್ರತಿನಿತ್ಯ ಮಾಡುವ ಅತಿ ಸುಲಭದ ಕೆಲವೆಂದರೆ, ಬೇreಯವರ ಬಗ್ಗೆ ಒಂದು ಅಭಿಪ್ರಾಯ ತಳೆದುಬಿಡೋದು. ಎದುರಿನ ವ್ಯಕ್ತಿಯ ಬಗ್ಗೆ ಏನೊಂದೂ ಅರಿಯದೆ ಕೇವಲ ಅವನ ಬಾಹ್ಯ ಅಪೀರನ್ಸ್ ಮೇಲೆ ನೆಗೆಟಿವ್ ಕಾಮೆಂಟ್ಗಳನ್ನು ಮಾಡಲಾರಂಭಿಸುತ್ತೇವೆ. ಇದು ಶುದ್ಧ ತಪ್ಪು ಅಂತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ. ನಮ್ಮಲ್ಲಿರುವ ಒಂದು ದೌರ್ಬಲ್ಯ ಅಥವಾ ನ್ಯೂನತೆಯನ್ನು ಮುಚ್ಚಿಟ್ಟುಕೊಳ್ಳವುದಕ್ಕಾಗಿ ನಾವು ಬೇರೆಯವರಲ್ಲಿ ತಪ್ಪು ಹುಡುಕುತ್ತೇವೆ. ನಮ್ಮ ವ್ಯಕ್ತಿತ್ವ, ನಾವು ಹಾಗೆ ಹೀಗೆ ಅಂತ ಕಾಮೆಂಟ್ ಮಾಡುತ್ತಿರುವ ವ್ಯಕ್ತಿಗಿಂತ ಕೆಟ್ಟದ್ದಾಗಿರಬಹುದು. ಹಾಗಾಗೇ ಬೇರೆಯವರಲ್ಲಿ ತಪ್ಪು ಹುಡುಕುವ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಸೌಜನ್ಯ ಹೇಳುತ್ತಾರೆ.
ಡಾ ಸೌಜನ್ಯ ಒಂದು ಸಣ್ಣ ಕತೆಯನ್ನು ಸಹ ಹೇಳಿದ್ದಾರೆ. ಒಮ್ಮೆ ಟ್ರೇನಿನಲ್ಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ತನ್ನೆದಿರು ಕೂತಿರುವ ಯುವಕನೊಬ್ಬ ತನ್ನಪ್ಪನಿಗೆ ರೈಲಿನಿಂದ ಆಚೆ ಕಾಣುವ ಎಲ್ಲ ದೃಶ್ಯಗಳ ಬಗ್ಗೆ ರೋಮಾಂಚಿತನಾಗಿ ಹೇಳುತ್ತಿರುತ್ತಿರುವುದು ಕಂಡು ಸೋಜಿಗವೆನಿಸುತ್ತದೆ. ನದಿ, ಗುಡ್ಡ, ಗಿಡಮರಗಳನ್ನು ಕಂಡು ಅವನು ಉದ್ಗರಿಸುತ್ತಾನೆ. ಬೆಳೆದು ದೊಡ್ಡವನಾಗಿದ್ದರೂ ಅವನ್ನೆಲ್ಲ ಮೊದಲ ಬಾರಿಗೆ ನೋಡಿದವದನ ಹಾಗೆ ಚೀರುತ್ತಾನಲ್ಲ ಅಂತ ಅವನೆಡೆ ಆಶ್ಚರ್ಯಚಕಿತನಾಗಿ ಆ ವ್ಯಕ್ತಿ ನೋಡುತ್ತಿರುತ್ತಾನೆ.
ಅವನ ಗೊಂದಲ ಅರ್ಥಮಾಡಿಕೊಳ್ಳುವ ಹುಡುಗನ ತಂದೆ, ಹುಟ್ಟು ಕುರುಡನಾಗಿದ್ದ ತನ್ನ ಮಗನಿಗೆ ಹಿಂದಿನ ದಿನವೇ ಆಪರೇಶನ್ ಆಗಿ ದೃಷ್ಟಿ ಬಂದಿರುವ ವಿಷಯವನ್ನು ಆ ವ್ಯಕ್ತಿಗೆ ತಿಳಿಸುತ್ತಾನೆ. ಮೊದಲ ಬಾರಿಗೆ ಅವನು ಪ್ರಪಂಚನ್ನು ನೋಡುತ್ತಿದ್ದಾನೆ ಅಂತ ಹುಡುಗನ ಅಪ್ಪ ಹೇಳಿದಾಗ ವ್ಯಕ್ತಿಯ ಮನಸ್ಸಿಗೆ ಬಹಳ ನೋವಾಗುತ್ತದೆ. ಹುಡುಗನ ಬಗ್ಗೆ ಏನೂ ಅರಿಯದೆ ಏನೆಲ್ಲ ಅಂದುಕೊಂಡುಬಿಟ್ಟೆನಲ್ಲ ಅಂತ ಹಿಂಸೆ ಅನುಭವಿಸುತ್ತಾನೆ.
ಡಾ ಸೌಜನ್ಯ ಅದನ್ನೇ ಹೇಳುತ್ತಾರೆ. ಹೊರಗಿನ ಅಪೀಯರೆನ್ಸ್ ಮೇಲೆ ಒಬ್ಬ ವ್ಯಕ್ತಿಯನ್ನು ಅಳೆಯಬಾರದು. ಅನ್ಯರ ಬಗ್ಗೆ ಕಾಮೆಂಟ್ ಮಾಡುವುದೇ ತಪ್ಪು ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: IND vs NZ: ಶತಕದ ಬಳಿಕ ರೋಹಿತ್- ಶಾರ್ದೂಲ್ ಜೊತೆ ಶೆಹ್ರಿ ಬಾಬು ಟ್ಯೂನ್‌ಗೆ ಸ್ಟೆಪ್ ಹಾಕಿದ ಶ್ರೇಯಸ್! ವಿಡಿಯೋ ನೋಡಿ