ಮೈಸೂರು: ಮಗುವಿನ ಶಾಲಾ ಶೂನಲ್ಲಿ ಇತ್ತೊಂದು ಚಿಕ್ಕ ನಾಗರಹಾವು, ಸ್ನೇಕ್ ಶ್ಯಾಮ್ ಅದನ್ನು ಹಿಡಿದೊಯ್ದರು!
ಅದೃಷ್ಟವಶಾತ್ ಮನೆಯಲ್ಲಿನ ದೊಡ್ಡವರು ಅದನ್ನು ಗಮನಿಸಿದ್ದಾರೆ ಮತ್ತು ಕೂಡಲೇ ಈ ಭಾಗದ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರನ್ನು ಅಲ್ಲಿಗೆ ಕರೆಸಿದ್ದಾರೆ.
Mysuru: ಶಾಲೆಗೆ ಹೋಗುವ ಮಕ್ಕಳು ಬೆಳಗಿನ ಹೊತ್ತು ಅವಸರದಲ್ಲಿ ತಯಾರಾಗಿ ಬ್ಯಾಗ್ ರೆಡಿ (school bag) ಮಾಡಿಕೊಂಡು, ಅಮ್ಮ ಕಟ್ಟಿದ ಲಂಚ್ ಬಾಕ್ಸನ್ನು (lunch box) ಬ್ಯಾಗಲ್ಲಿ ತೂರಿಸಿಕೊಂಡು ಅದೇ ಧಾವಂತಲ್ಲಿ ಶೂ (shoes) ಧರಿಸುವುದು ಪ್ರತಿದಿನ ನಾವು ಕಾಣುವ ದೃಶ್ಯ. ಆದರೆ ಮೈಸೂರು ಹೆಬ್ಬಾಳದ ಎರಡನೇ ಹಂತ ಬಡಾವಣೆಯ ಮನೆಯೊಂದರಲ್ಲಿ ಏನಾಗಿದೆ ಅಂತ ನೋಡಿ ಮಾರಾಯ್ರೇ. ಮಗುವಿನ ಶೂನಲ್ಲಿ ಮಿಡಿನಾಗರ! ಅದೃಷ್ಟವಶಾತ್ ಮನೆಯಲ್ಲಿನ ದೊಡ್ಡವರು ಅದನ್ನು ಗಮನಿಸಿದ್ದಾರೆ ಮತ್ತು ಕೂಡಲೇ ಈ ಭಾಗದ ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರನ್ನು ಅಲ್ಲಿಗೆ ಕರೆಸಿದ್ದಾರೆ. ಶ್ಯಾಮ್ ಹಾವನ್ನು ಅನಾಮತ್ತಾಗಿ ಒಂದು ಡಬ್ಬದಲ್ಲಿ ಹಾಕ್ಕೊಂಡು ಸುರಕ್ಷಿತವಾದ ಸ್ಥಳವೊಂದಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಯಾರಿಗೂ ಅನಾಹುತ ಆಗದಿರುವುದು ಅದೃಷ್ಟವೇ ಸರಿ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.