ಚಿತ್ರದುರ್ಗ: ಮೊಬೈಲ್ ನೆಟ್ವರ್ಕ್ ಟವರ್ ಸಹ ಬಿರುಗಾಳಿ ಮತ್ತು ಜೋರುಮಳೆಯ ಭರಾಟೆಗೆ ನೆಲಕ್ಕೆ ಉರುಳಿದೆ
ಅದು ಉರುಳಿರೋದ್ರಿಂದ ಪ್ರಾಣಹಾನಿಯಂಥ ಸಂಗತಿ ಸಂಭವಿಸಿಲ್ಲವಾದರೂ ಒಂದು ಗೂಡಂಗಡಿ ಅದರ ಕೆಳಗೆ ಸಿಕ್ಕು ಅಪ್ಪಚ್ಚಿ ಅಗಿದೆ ಮಾರಾಯ್ರೇ. ಟವರ್ ಬುಡಸಮೇತ ಉರುಳಿಲ್ಲ. ಗಾಳಿಯ ರಭಸಕ್ಕೆ ನಡುಭಾಗದಿಂದ ಬಾಗಿಬಿಟ್ಟಿದೆ.
ಚಿತ್ರದುರ್ಗ: ಬಿರುಗಾಳಿ ಮತ್ತು ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನಮ್ಮ ರಾಜ್ಯದಲ್ಲಿ ಇನ್ಯಾವ ಅನಾಹುತಗಳನ್ನು ಸೃಷ್ಟಿಸಲಿವೆಯೋ? ಈಗಂತೂ ಮಳೆಗಾಲ (rainy season) ಕೂಡ ಸೃಷ್ಟಿಯಾಗಿದೆ. ಮೇನಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಜೋರು ಗಾಳಿಯಿಂದ ಉಂಟಾದ ಹಾನಿಗಳ ಬಗ್ಗೆ ನಾವು ವ್ಯಾಪಕವಾಗಿ ವರದಿ ಮಾಡಿದ್ದೇವೆ. ಅದು ಜೂನ್ ತಿಂಗಳಲ್ಲೂ ಮುಂದುವರಿದಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಎರಡು ಗ್ರಾಮಗಳಲ್ಲರುವ ಶಾಲೆಗಳು ಶೀಟುಗಳು ಜೋರು ಗಾಳಿ ಮತ್ತು ಮಳೆಗೆ ಕಿತ್ತು ಬಂದು ನೆಲಕ್ಕೆ ಬಿದ್ದ ಸಂಗತಿಯನ್ನು ನಾವು ಚರ್ಚೆ ಮಾಡಿದ್ದೇವೆ. ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದುರ್ಗಾವರ (Durgavara) ಗ್ರಾಮದಲ್ಲಿ ನೆಟ್ ವರ್ಕ್ ಟವರ್ ಒಂದು ನೆಲಕ್ಕುರುಳಿರುವ ವಿಡಿಯೊ ನಮಗೆ ಸಿಕ್ಕಿದೆ. ಟವರ್ ಉರುಳಿರೋದು ಜೋರು ಗಾಳಿ ಮತ್ತು ಮಳೆಯಿಂದಾಗಿ.
ಅದು ಉರುಳಿರೋದ್ರಿಂದ ಪ್ರಾಣಹಾನಿಯಂಥ ಸಂಗತಿ ಸಂಭವಿಸಿಲ್ಲವಾದರೂ ಒಂದು ಗೂಡಂಗಡಿ ಅದರ ಕೆಳಗೆ ಸಿಕ್ಕು ಅಪ್ಪಚ್ಚಿ ಅಗಿದೆ ಮಾರಾಯ್ರೇ. ಟವರ್ ಬುಡಸಮೇತ ಉರುಳಿಲ್ಲ. ಗಾಳಿಯ ರಭಸಕ್ಕೆ ನಡುಭಾಗದಿಂದ ಬಾಗಿಬಿಟ್ಟಿದೆ. ಅದೃಷ್ಟವಶಾತ್ ಈ ಪಕ್ಕಕ್ಕೆ ವಾಲಿದೆ, ವಿರುದ್ಧ ದಿಕ್ಕಿಗೇನಾದರೂ ವಾಲಿದ್ದರೆ ವಿದ್ಯತ್ ಲೈನ್ ಗಳ ಮೇಲೆ ಬಿದ್ದು ಅನಾಹುತಕ್ಕೆ ಕಾರಣವಾಗುತಿತ್ತು.
ಊರಲ್ಲಿ ಟವರ್ ನೆಡಲು ಜನ ಮೊದಲ ದಿನದಿಂದಲೇ ವಿರೋಧಿಸುತ್ತಿದ್ದರಂತೆ. ಅವರ ಆತಂಕ ನಿಜವಾಗಿದೆ. ಆದರೆ ಮಳೆ ಗಾಳಿಯಿಂದ ಮೊಬೈಲ್ ನೆಟ್ ವರ್ಕ್ ಟವರ್ ಗಳು ಉರುಳೋದು ಅಪರೂಪ. ಅಂದಹಾಗೆ ಗೂಡಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ. ಅದರ ಮಾಲೀಕನಿಗೆ ಅಗಿರುವ ನಷ್ಟವನ್ನು ಟವರ್ ನೆಟ್ಟ ಸಂಸ್ಥೆ ಭರಿಸುವುದೇ ಅಂತ ಕಾದು ನೋಡಬೇಕು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.