ತನ್ನ ಜೊತೆ ವಾಗ್ವಾದ ನಡೆಸಿದ ಬೈಕ್ ಸವಾರನಿಗೆ ಕಾರಿನಿಂದ ಢಿಕ್ಕಿ ಹೊಡೆದು ಪರಾರಿಯಾದ ದುಬಾರಿ ಕಾರಿನ ಚಾಲಕ
ಜಗಳ ಮಾಡುತ್ತಲೇ ಕಾರಿನ ಚಾಲಕ ವೇಗವಾಗಿ ಮುಂದೆ ಹೋಗುತ್ತಾನೆ. ಬೈಕ್ ಸವಾರರು ಅವನನ್ನು ಹಿಂಬಾಲಿಸುತ್ತಾರೆ. ಸ್ವಲ್ಪ ದೂರ ಹೋದ ಬಳಿಕ ಅವನು ಉದ್ದೇಶಪೂರ್ವಕವಾಗಿ ಒಬ್ಬ ಬೈಕ್ ಸವಾರನಿಗೆ ತನ್ನ ಕಾರನ್ನು ತಾಕಿಸಿ ಸುಂಯ್ ಅಂತ ಗಾಳಿ ವೇಗದಲ್ಲಿ ಪರಾರಿಯಾಗುತ್ತಾನೆ.
New Delhi: ಇದು ದುರಹಂಕಾರ, ಶ್ರೀಮಂತಿಕೆಯ ಸೊಕ್ಕು ಮತ್ತು ದರ್ಪವಲ್ಲದೆ ಮತ್ತೇನಾಗಲು ಸಾಧ್ಯ ಅಂತ ನೀವೇ ಹೇಳಿ ಮಾರಾಯ್ರೇ. ಒಬ್ಬ ವ್ಯಕ್ತಿ ಒಂದುದ ದುಬಾರಿ ಎಸ್ ಯು ವಿ ಯನ್ನು (SUV) ಓಡಿಸಿಕೊಂಡು ಹೋಗುತ್ತಿದ್ದಾನೆ. ಅವನ ಹಿಂದೆ ನಾಲ್ವರು ಬೈಕ್ ಸವಾರರು (bikers) ಹೋಗುತ್ತಿದ್ದಾರೆ. ಅವರ ನಡುವೆ ಯಾವುದೋ ಕಾರಣಕ್ಕೆ ಮಾತಿನ ಚಕಮಕಿ (altercation) ನಡೆದಿದೆ. ಜಗಳದ ಕಾರಣವೇನು ಅಂತ ನಮಗೆ ಗೊತ್ತಾಗಿಲ್ಲ. ಬೈಕ್ ಸವಾರರು ಕಾರಿನ ಚಾಲಕನೊಂದಿಗೆ ಮಾತಾಡುವಾಗ ಅವನು ತನ್ನ ಕೈ ಹೊರಹಾಕಿ ಜೋರು ಮಾಡುತ್ತಿರೋದು ವಿಡಿಯೋನಲ್ಲಿ ಕಾಣಿಸುತ್ತದೆ.
ಬೈಕ್ ಸವಾರರಲ್ಲಿ ಒಬ್ಬರು ಇದನ್ನೆಲ್ಲ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಓಕೆ ಇದು ನಡೆದಿದ್ದೆಲ್ಲಿ ಅಂತ ನಿಮಗೆ ಹೇಳಲಿಲ್ಲ. ನವದೆಹಲಿ ಅರ್ಜುನ್ ಗಢ್ ಮೆಟ್ರೋ ರೇಲ್ವೇ ನಿಲ್ದಾಣದ ಬಳಿ ಸೋಮವಾರ ಬೆಳಗ್ಗೆ ನಡೆದಿರುವ ಘಟನೆ ಇದು.
ಸರಿ ಮುಂದೇನಾಗುತ್ತದೆ ಅಂತ ನೋಡಿ. ಜಗಳ ಮಾಡುತ್ತಲೇ ಕಾರಿನ ಚಾಲಕ ವೇಗವಾಗಿ ಮುಂದೆ ಹೋಗುತ್ತಾನೆ. ಬೈಕ್ ಸವಾರರು ಅವನನ್ನು ಹಿಂಬಾಲಿಸುತ್ತಾರೆ. ಸ್ವಲ್ಪ ದೂರ ಹೋದ ಬಳಿಕ ಅವನು ಉದ್ದೇಶಪೂರ್ವಕವಾಗಿ ಒಬ್ಬ ಬೈಕ್ ಸವಾರನಿಗೆ ತನ್ನ ಕಾರನ್ನು ತಾಕಿಸಿ ಸುಂಯ್ ಅಂತ ಗಾಳಿ ವೇಗದಲ್ಲಿ ಪರಾರಿಯಾಗುತ್ತಾನೆ.
ಬೈಕ್ ಸವಾರನ ಅದೃಷ್ಟ ಚೆನ್ನಾಗಿತ್ತು. ಕಾರು ಢಿಕ್ಕಿ ಹೊಡೆದ ನಂತರ ಅವರ ಬೈಕ್ 8-10 ಅಡಿಗಳಷ್ಟು ದೂರ ಜಾರುತ್ತಾ ಹೋಗಿ ರಸ್ತೆ ಬದಿಯ ಪಾವ್ಮೆಂಟ್ ಗೆ ಗುದ್ದಿ ಗುದ್ದಿ ನಿಂತು ಬಿಡುತ್ತದೆ. ಆದರೆ ಸವಾರನಿಗೆ ಗಂಭೀರ ಸ್ವರೂಪದ ಗಾಯಗಳೇನೂ ಅಗಿಲ್ಲ, ಅವರು ಕೂಡಲೇ ಎದ್ದು ನಿಲ್ಲುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ.
ಕಾರಿನಲ್ಲಿದ್ದ ವ್ಯಕ್ತಿ ಯಾರೆಂದು ಗೊತ್ತಾಗಿಲ್ಲ.
ಬೈಕ್ ಸವಾರರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.