ವಿಜಯಪುರದಿಂದ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದ ಗೌಸ್ ಮೊಹಿಯುದ್ದೀನ್ ಮತ್ತವರ ಮಗಳು ಹಾಜಿರ

|

Updated on: Nov 06, 2023 | 1:01 PM

ದೇವನೊಬ್ಬ ನಾಮ ಹಲವು ಅಂತ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದನ್ನು ಗೌಸ್ ಪುನರುಚ್ಛರಿಸಿ ತಮಗೆ ಯಾವುದೇ ದೇವ ದೇವತೆಯರ ಬಗ್ಗೆ ಭೇದಭಾವ ಇಲ್ಲ ಅನ್ನುತ್ತಾರೆ. ಹಿಂದೂ-ಮುಸ್ಲಿಂ ಜಗಳ, ಮತೀಯ ಗಲಭೆ ಸ್ವಾಭಾವಿಕ ಅನ್ನುವ ಮಟ್ಟಿಗೆ ಜನರು ಮೆದುಳನ್ನು ಟ್ಯೂನ್ ಮಾಡಿಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಗೌಸ್ ಮತ್ತು ಹಾಜಿರ ಸರ್ವಧರ್ಮ ಸಮನ್ವಯತೆಯ ಪ್ರತಿನಿಧಿಗಳಾಗಿ ಗೋಚರವಾಗುತ್ತಾರೆ.

ಹಾಸನ: ಈ ತಂದೆ ಮತ್ತು ಮಗಳನ್ನು ನೋಡಿ ಮಾರಾಯ್ರೇ. ತಂದೆಯ ಹೆರು ಗೌಸ್ ಮೊಹಿಯುದ್ದೀನ್ (Ghouse Mohiuddin)ಮತ್ತು ಮಗಳು ಹಜೀರ (Hajira). ಗೌಸ್ ಕೆಪಿಟಿಸಿಎಲ್ ಉದ್ಯೋಗಿಯಾಗಿದ್ದರೆ ಹಾಜಿರ ಸಹ ಯಾವುದೋ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ದೂರದ ವಿಜಯಪುರದಿಂದ ಇವರು ಹಾಸನಾಂಬೆಯ ದರ್ಶನ ಪಡೆಯಲು ಹಾಸನಕ್ಕೆ ಬಂದಿದ್ದಾರೆ. ಹಾಸನಾಂಬೆಯ ದರ್ಶನ (Hasanambe Darshana) ಮಾಡಿದರೆ ಒಳ್ಳ್ಳೆಯದಾಗುತ್ತದೆ ಎಂಬ ನಂಬಿಕೆ ತಮಗೆ ಇರುವ ಕಾರಣ ದರ್ಶನಕ್ಕೆ ಬಂದಿರುವುದಾಗಿ ಗೌಸ್ ಮತ್ತು ಹಾಜಿರ ಇಬ್ಬರೂ ಹೇಳುತ್ತಾರೆ. ದೇವನೊಬ್ಬ ನಾಮ ಹಲವು ಅಂತ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದನ್ನು ಗೌಸ್ ಪುನರುಚ್ಛರಿಸಿ ತಮಗೆ ಯಾವುದೇ ದೇವ ದೇವತೆಯರ ಬಗ್ಗೆ ಭೇದಭಾವ ಇಲ್ಲ ಅನ್ನುತ್ತಾರೆ. ಹಿಂದೂ-ಮುಸ್ಲಿಂ ಜಗಳ, ಮತೀಯ ಗಲಭೆ ಸ್ವಾಭಾವಿಕ ಅನ್ನುವ ಮಟ್ಟಿಗೆ ಜನರು ಮೆದುಳನ್ನು ಟ್ಯೂನ್ ಮಾಡಿಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಗೌಸ್ ಮತ್ತು ಹಾಜಿರ ಸರ್ವಧರ್ಮ ಸಮನ್ವಯತೆಯ ಪ್ರತಿನಿಧಿಗಳಾಗಿ ಗೋಚರವಾಗುತ್ತಾರೆ. ಇದೇ ಮೊದಲ ಸಲ ಹಾಸನಾಂಬೆ ದರ್ಶನಕ್ಕೆ ಬಂದಿರುವ ಹಾಜಿರಗೆ ಸಹೋದ್ಯೋಗಿಗಳಿಂದ ಹಾಸನಾಂಬೆ ಉತ್ಸವದ ಬಗ್ಗೆ ಗೊತ್ತಾಗಿದೆಯಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on