Sign In

By signing in or creating an account, you agree with Associated Broadcasting Company's Terms & Conditions and Privacy Policy.

Davangere News: ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ, ರೈತಾಪಿ ಸಮುದಾಯದಲ್ಲಿ ಸಂತಸ, ಉತ್ಸಾಹ

Davangere News: ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಧಾರಾಕಾರ ಮಳೆ, ರೈತಾಪಿ ಸಮುದಾಯದಲ್ಲಿ ಸಂತಸ, ಉತ್ಸಾಹ

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Nov 06, 2023 | 12:18 PM

Davangere Rain: ದಾವಣಗೆರೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆರಾಯ ಕೃಪೆ ತೋರಿದ್ದಾನೆ. ವಿಳಂಬವಾಗಿ ಸುರಿದರೂ ಮಳೆ ರೈತಾಪಿ ಸಮುದಾಯದಲ್ಲಿ ಸಂತಸ ತದಿದೆ. ಆದರೆ, ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯಿಲ್ಲದೆ ಬೆಳೆ ಹಾಳಾಗಿವೆ. ಹಾಗಾಗಿ, ಈಗ ಸುರಿದಿರುವ ಮಳೆ ಪ್ರಯೋಜನಕಾರಿಯೇ ಅಂತ ರೈತರೇ ಹೇಳಬಲ್ಲರು.

ದಾವಣಗೆರೆ: ರಾಜ್ಯದ ಯಾವುದೇ ಭಾಗದಲ್ಲಿ ಮಳೆಯಯಾದರೂ ನಮಗೆ ಖುಷಿಯಾಗುತ್ತದೆ. ಈ ಸಲದ ಕೊರತೆ ಮಳೆ ಮತ್ತು ಅದರಿಂದ ಉಂಟಾಗಿರುವ ಭೀಕರ ಬರ ಕನ್ನಡಿಗರನ್ನು ಆ ಸ್ಥಿತಿಗೆ ತಂದಿಟ್ಟಿದೆ. ನಮ್ಮ ನಾಯಕರು (politicos) ಈಗಲೂ ಮಳೆಯಾಗಲಿ ಅಂತ ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ದಾವಣಗೆರೆಯಲ್ಲಿ (Davanagere) ಇಂದು ಬೆಳ್ಳಂಬೆಳಗ್ಗೆ ಮಳೆರಾಯ ಕೃಪೆ ತೋರಿದ್ದಾನೆ. ದಾವಣೆಗೆರೆಯ ಟಿವಿ9 ಕನ್ನಡ ವಾಹಿನಿ ವರದಿಗಾರ ಹೇಳುವ ಹಾಗೆ, ಬೆಳಗ್ಗೆ 4 ಗಂಟೆಯಿಂದ ಮಳೆ ಸುರಿಯಲಾರಂಭಿಸಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ರಸ್ತೆ (APMC Road), ಈರುಳ್ಳಿ ಮಾರುಕಟ್ಟೆ ರಸ್ತೆಗಳು ಜಲಾವೃತಗೊಂಡಿದ್ದು ಮೊಣಕಾಲು ಮಟ್ಟದವರೆಗೆ ನೀರು ನಿಂತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ವಿಳಂಬವಾಗಿ ಸುರಿದರೂ ಮಳೆ ರೈತಾಪಿ ಸಮುದಾಯದಲ್ಲಿ ಸಂತಸ ತದಿದೆ. ಆದರೆ, ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯಿಲ್ಲದೆ ಬೆಳೆ ಹಾಳಾಗಿವೆ. ಹಾಗಾಗಿ, ಈಗ ಸುರಿದಿರುವ ಮಳೆ ಪ್ರಯೋಜನಕಾರಿಯೇ ಅಂತ ರೈತರೇ ಹೇಳಬಲ್ಲರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 06, 2023 11:03 AM