Power cut: ಠಾಣೆಗೂ ಕರೆಂಟ್ ಕಟ್ ಶಾಕ್, ಮೊಬೈಲ್ ಟಾರ್ಚ್ನಲ್ಲಿ ವಿಜಯಪುರ ಪೊಲೀಸರಿಂದ ಕರ್ತವ್ಯ ನಿರ್ವಹಣೆ
ನೊಂದವರು ದೂರು ಕೊಡೋಕ್ಕೆ ಅಂತ ಪೊಲೀಸ್ ಠಾಣೆಗೆ ಸಂಜೆ ವೇಳೆ ಹೋದ್ರೆ ಮೊಬೈಲ್ ನಲ್ಲಿ ಟಾರ್ಚ್ ಹಾಕಿಕೊಂಡು ದೂರು ನೀಡಲು ನಿಲ್ಲುವಂತಹ ದುಃಸ್ಥಿತಿ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಟಾರ್ಚ್ ಹಾಕ್ಕೊಂಡು ನಿಲ್ಲುವ ಸ್ಥಿತಿ ಎದುರಾಗಿದೆ.
ನೊಂದವರು ದೂರು ಕೊಡೋಕ್ಕೆ ಅಂತ ಪೊಲೀಸ್ ಠಾಣೆಗೆ ಸಂಜೆ ವೇಳೆ ಹೋದ್ರೆ ಮೊಬೈಲ್ ನಲ್ಲಿ ಟಾರ್ಚ್ ಹಾಕಿಕೊಂಡು ದೂರು ನೀಡಲು ನಿಲ್ಲುವಂತಹ ದುಃಸ್ಥಿತಿ ಎದುರಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ (Vijayapura police station in Devanahalli) ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಟಾರ್ಚ್ ಹಾಕ್ಕೊಂಡು ನಿಲ್ಲುವ ಸ್ಥಿತಿ ಎದುರಾಗಿದ್ದು ಠಾಣೆ ವಿರುದ್ದ ಸಾರ್ವಜನಿಕರು ಅಸಮಾಧಾನ ಹೊರ ಹಾಕ್ತಿದ್ದಾರೆ.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಪದೇ ಪದೇ ಲೋಡ್ ಶೆಡ್ಡಿಂಗ್ (Power cut shock) ಮೂಲಕ ಪವರ್ ಕಟ್ ಮಾಡ್ತಿದ್ದು ಒಮ್ಮೆ ಕರೆಂಟ್ ಕಟ್ ಆದ್ರೆ ಕನಿಷ್ಟ ಒಂದು ಗಂಟೆಯಾದ್ರೆ ವಾಪಸ್ ಕರೆಂಟ್ ಬರ್ತಿಲ್ಲ. ಜೊತೆಗೆ ಪೊಲೀಸ್ ಠಾಣೆಯಲ್ಲಿ ಇದ್ದ ಯುಪಿಎಸ್ ಸಹ ಕೆಟ್ಟು ಸಾಕಷ್ಟು ದಿನವಾಗಿದ್ದು ಅದನ್ನ ರಿಪೇರಿ ಮಾಡುವ ಕೆಲಸಕ್ಕೂ ಪೊಲೀಸರು ಮುಂದಾಗಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ಸಂಜೆ ವೇಳೆ ಸಾರ್ವಜನಿಕರು ಬಂದ್ರೆ ಮೊಬೈಲ್ ಬೆಳಕನ್ನ ಹಾಕಿಕೊಂಡು ದೂರು ಬರೆದು ಕೊಡುವ ದುಃಸ್ಥಿತಿ ಎದುರಾಗಿದೆ. ಪವರ್ ಕಟ್ ನಿಂದ ಸಾಕಷ್ಟು ಸಮಸ್ಯೆಯಾಗ್ತಿದೆ ಅಂತ ಸಾರ್ವಜನಿಕರು ಆಕ್ರೋಶ ಹೊರ ಹಾಕ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.