VIDEO: ಈಡನ್ ಗಾರ್ಡನ್ಸ್ ಪಿಚ್​ಗೆ ಮನಸೋತ ಕೊಹ್ಲಿ: ಗ್ರೌಂಡ್ಸ್ ಮೆನ್​ಗಳನ್ನು ಮರೆಯದ ವಿರಾಟ್

VIDEO: ಈಡನ್ ಗಾರ್ಡನ್ಸ್ ಪಿಚ್​ಗೆ ಮನಸೋತ ಕೊಹ್ಲಿ: ಗ್ರೌಂಡ್ಸ್ ಮೆನ್​ಗಳನ್ನು ಮರೆಯದ ವಿರಾಟ್

Vinay Bhat
|

Updated on: Nov 06, 2023 | 8:57 AM

Virat Kohli with Eden Gardens staff: ಈಡನ್ ಗಾರ್ಡನ್ಸ್​ನಲ್ಲಿ ಸಾಕಷ್ಟು ಶ್ರಮವಹಿಸಿದ ಮೈದಾನದ ಸಿಬ್ಬಂದಿಗಳನ್ನು ಮರೆಯದ ವಿರಾಟ್ ಕೊಹ್ಲಿ, ಅವರನ್ನು ಭೇಟಿಯಾಗಿ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಭಾನುವಾರ ಆಯೋಜಿಸಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಪಂದ್ಯ ಸಂಪೂರ್ಣವಾಗಿ ಭಾರತದ ಪರವಾಗಿ ಆಯಿತು. ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಟೀಮ್ ಇಂಡಿಯಾ 326 ರನ್ ಕಲೆಹಾಕಿದರೆ, ಆಫ್ರಿಕಾ 83 ರನ್​ಗೆ ಸರ್ವಪತನ ಕಂಡಿತು. ನಿಧಾನಗತಿಯ ಪಿಚ್​ನಲ್ಲಿ ಬ್ಯಾಟರ್​ಗಳು ರನ್ ಗಳಿಸಲು ಪರದಾಡಿದರು. ಆದರೆ, ಕೊಹ್ಲಿ 121 ಎಸೆತಗಳಲ್ಲಿ 10 ಫೋರ್​ನೊಂದಿಗೆ ಅಜೇಯ 101 ರನ್ ಗಳಿಸಿದರು. ನಾಯಕ ರೋಹಿತ್ ಕೂಡ ಪಿಚ್ ಬಗ್ಗೆ ಮಾತನಾಡಿ, ”ಪಿಚ್ ತುಂಬಾನೆ ವಿಭಿನ್ನವಾಗಿತ್ತು. ಬ್ಯಾಟಿಂಗ್ ಮಾಡಲು ತುಂಬಾ ಕಷ್ಟವಾಗುತ್ತಿತ್ತು. ಇಂತಹ ಪಿಚ್​ನಲ್ಲಿ ಆಡಲು ವಿರಾಟ್ ಕೊಹ್ಲಿ ಬೇಕಾಗಿತ್ತು,” ಎಂದರು. ಇದರ ನಡುವೆ ಈಡನ್ ಗಾರ್ಡನ್ಸ್​ನಲ್ಲಿ ಸಾಕಷ್ಟು ಶ್ರಮವಹಿಸಿದ ಮೈದಾನದ ಸಿಬ್ಬಂದಿಗಳನ್ನು ಮರೆಯದ ಕಿಂಗ್ ಕೊಹ್ಲಿ, ಅವರನ್ನು ಭೇಟಿಯಾಗಿ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ