Bengaluru News: ಉಚಿತ ಪ್ರಯಾಣಕ್ಕಾಗಿ ಉತ್ತರ ಭಾರತದ ಯುವತಿಯೊಬ್ಬಳಿಂದ ಬಿಎಂಟಿಸಿ ಬಸ್ ಕಂಡಕ್ಟರ್ ಮೇಲೆ ರೋಪ್!
ಅಸಲಿಗೆ ಉತ್ತರ ಭಾರತದ ಯುವತಿ ಶಕ್ತಿ ಯೋಜನೆ ಸೌಲಭ್ಯ ಪಡೆಯಲು ಅರ್ಹಳೇ ಅಲ್ಲ.
ಬೆಂಗಳೂರು: ಒಂದೆಡೆ ಸರ್ಕಾರಿ ಬಸ್ಸುಗಳ ಡ್ರೈವರ್ ಮತ್ತು ಕಂಡಕ್ಟರ್ ಗಳು ವಿದ್ಯಾರ್ಥಿನಿ ಮತ್ತು ಮಹಿಳೆಯರ ಮೇಲೆ ರೋಪ್ ಹಾಕಿದರೆ, ಈ ಬಿಎಮ್ ಟಿಸಿ ಬಸ್ಸಲ್ಲಿ (BMTC Bus) ಕಾಣುತ್ತಿರುವ ಈ ದೃಶ್ಯ ಅದಕ್ಕೆ ತದ್ವಿರುದ್ಧವಾಗಿದೆ. ಯುವತಿ ಉತ್ತರ ಭಾರತದವಳು ಮತ್ತು ತಾನೊಬ್ಬ ಕೇಂದ್ರ ಸರ್ಕಾರ ಉದ್ಯೋಗಿ (central government employee) ಅಂತ ಹೇಳುತ್ತಿದ್ದಾಳೆ. ಬಿಎಂಟಿಸಿ ಮತ್ತು ಕೆ ಎಸ್ ಆರ್ ಟಿಸಿ ಬಸ್ ಗಳಲ್ಲಿ ಕೇವಲ ಕರ್ನಾಟಕದ ಮಹಿಳೆಯರಿಗೆ ಮಾತ್ರ ಉಚಿತ ಸಾರಿಗೆಯ ಸೌಲಭ್ಯವಿದೆ. ಐಡಿ ಪ್ರೂಫ್ ಗಾಗಿ ಮಹಿಳೆಯರು ಆಧಾರ್ ಇಲ್ಲವೇ ವೋಟರ್ ಐಡಿ ಹೊಂದಿರಬೇಕಾಗುತ್ತದೆ. ಅಸಲಿಗೆ ಈ ಯುವತಿ ಶಕ್ತಿ ಯೋಜನೆ ಸೌಲಭ್ಯ ಪಡೆಯಲು ಅರ್ಹಳೇ ಅಲ್ಲ. ಆಧಾರ್ ಕಾರ್ಡ್ ತೋರಿಸಿ ಆಂತ ಸೌಜನ್ಯತೆಯಿಂದ ಕೇಳುತ್ತಿರುವ ಕಂಡಕ್ಟರ್ ಮೇಲೆ ದರ್ಪ ಪ್ರದರ್ಶಿಸುತ್ತಿದ್ದಾಳೆ. ಬಸ್ಸಲ್ಲಿರುವ ಇತರ ಪ್ರಯಾಣಿಕರು ತಿಳಿ ಹೇಳಿದರೂ ಆಕೆಗೆ ಅರ್ಥವಾಗೋದಿಲ್ಲ. ತಮ್ಮ ಮೇಲಧಿಕಾರಿಗಳ ಬಳಿ ಬಂದು ಮಾತಾಡಿ ಅಂತ ಕಂಡಕ್ಟರ್ ಹೇಳುತ್ತಿರುವುದು ಕೇಳಿಸುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ