ಮೈಸೂರಿನಲ್ಲಿ ಒಣಗಿದ ಬೆಳೆಯನ್ನು ಕಂಡು ಕಣ್ಣೀರಾಕಿದ ವೃದ್ಧೆ; ಆಕ್ರೋಶ ಹೊರಹಾಕಿದ ಅಜ್ಜಿ ವಿಡಿಯೋ ಇಲ್ಲಿದೆ

| Updated By: sandhya thejappa

Updated on: Mar 23, 2022 | 11:20 AM

ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಅಂತ ಅಜ್ಜಿ ಆರೋಪಿಸಿದ್ದಾರೆ. ಚೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಅಜ್ಜಿ ಆಕ್ರೋಶ ಹೊರಹಾಕಿದ್ದಾರೆ.

ಮೈಸೂರು: ಸರಿಯಾದ ಕಾಲಕ್ಕೆ ಮಳೆ (Rain) ಇಲ್ಲ ಅಂದರೆ ರೈತರು (Farmers) ಬೆಳೆದ ಬೆಳೆ ಮಣ್ಣು ಪಾಲಾಗುತ್ತದೆ. ಧಾರಾಕಾರ ಮಳೆ ಸುರಿದರೂ ಬೆಳೆ ಹೊಲದಲ್ಲೆ ಕೊಳೆಯುತ್ತದೆ. ಈ ಎಲ್ಲದರ ನಡುವೆ ಕರೆಂಟ್ ಸಮಸ್ಯೆ. ಒಟ್ಟಾರೆ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಮಾತ್ರ ಕೊನೆಯಲ್ಲಿ ಕಣ್ಣೀರೆ ಗತಿಯಾಗಿದೆ. ಹೀಗೆ ತಾವು ಬೆಳೆದ ಬೆಳೆಯನ್ನು ಕಂಡು ಮೈಸೂರಿನಲ್ಲಿ ಅಜ್ಜಿ ಕಣ್ಣೀರು ಹಾಕಿದ್ದಾರೆ. ಸಕಾಲಕ್ಕೆ ನೀರು ಹರಿಸಲಾಗದೆ ಬೆಳೆ ಒಣಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಅಂತ ಅಜ್ಜಿ ಆರೋಪಿಸಿದ್ದಾರೆ. ಚೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಅಜ್ಜಿ ಆಕ್ರೋಶ ಹೊರಹಾಕಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗೆ ನೀರು ಹರಿಸಲಾಗಿಲ್ಲ ಅಂತ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಹೊಸೂರುಹುಂಡಿ ಗ್ರಾಮದಲ್ಲಿ ಬೆಳೆ ಒಣಗಿದ ನಿಂತಿದೆ.

ಇದನ್ನೂ ಓದಿ

World Meteorological Day 2022: ಬದಲಾಗುವ ಹವಾಮಾನದೆಡೆಗೆ ಇರಲಿ ಗಮನ

ಬಾಗಲಕೋಟೆ: ಉರುಸ್​ನಲ್ಲಿ ಊಟ ಸೇವಿಸಿದ್ದ 50ಕ್ಕೂ ಹೆಚ್ಚು ಜನ ಅಸ್ವಸ್ಥ

 

Follow us on