ಚಿತ್ರದುರ್ಗ: ಭಾರತ ಜೋಡೊ ಯಾತ್ರೆಯಲ್ಲಿ ಪಿಕ್​ಪಾಕೆಟ್​ನೊಬ್ಬ ತನ್ನ ಕೈಚಳಕ ತೋರುತ್ತಿರುವಾಗಲೇ ಸಿಕ್ಕಿಬಿದ್ದ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 10, 2022 | 12:30 PM

ಭಾರತ ಜೋಡೊ ಯಾತ್ರೆಯಲ್ಲಿ ಭಾಗವಹಿಸಿರುವ ಈ ಯುವ ಪಿಕ್​ಪಾಕೆಟ್ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ. ತನ್ನ ಕೈಚಳಕ ತೋರುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಚಿತ್ರದುರ್ಗ: ಜನರಿಗೆಲ್ಲ ತಮ್ಮದೇ ಆದ ಚಿಂತೆ ಮಾರಾಯ್ರೇ. ಭಾರತ ಜೊಡೋ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವಗೊಳಿಸಿಸುವ ಚಿಂತೆ. ಸಿದ್ದರಾಮಯ್ಯಗೆ ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಚಿಂತೆಯಾದರೆ, ಡಿಕೆ ಶಿವಕುಮಾರ್ (DK Shivakumar) ಒಮ್ಮೆ ಆ ಹಾಟ್ ಸೀಟ್ ಮೇಲೆ ಕೂರುವ ಚಿಂತೆ. ಕಾಂಗ್ರೆಸ್ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ರಾಹುಲ್ ರನ್ನು ಇಂಪ್ರೆಸ್ ಮಾಡುವ ಚಿಂತೆ. ಹಾಗೆಯೇ, ಚಿತ್ರದುರ್ಗ (Chitradurga) ಜಿಲ್ಲೆಯ ಮೂಲಕ ಹಾದು ಹೋಗುತ್ತಿರುವ ಭಾರತ ಜೋಡೊ ಯಾತ್ರೆಯಲ್ಲಿ ಭಾಗವಹಿಸಿರುವ ಈ ಯುವ ಪಿಕ್​ಪಾಕೆಟ್ ಗೆ (pickpocket) ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ. ತನ್ನ ಕೈಚಳಕ ತೋರುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.