ತಳ್ಳುಗಾಡಿಯಲ್ಲಿ ಹೂಮಾರುವ ವ್ಯಾಪಾರಿಗೆ ₹ 50 ಲಕ್ಷ ತೆರಿಗೆ ಕಟ್ಟುವಂತೆ ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ನೋಟೀಸ್

ಅರುಣ್​ ಕುಮಾರ್​ ಬೆಳ್ಳಿ

Updated on: Jul 18, 2025 | 6:53 PM

ಮತ್ತೊಬ್ಬರು ಹಾಲಿನ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿ. ಇವರು ಹೇಳುವಂತೆ ಒಂದು ಲೀಟರ್ ಹಾಲು ಮಾರಿದರೆ ಸಿಗೋದು 1 ರೂ ಮಾತ್ರ. ಇವರಿಗೆ ಇನ್ನೂ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್ ಬಂದಿಲ್ಲ ಅದರೆ ಬರೋದು ನಿಶ್ಚಿತ ಅಂತ ಇವರ ಅಂಗಡಿಯ ಅಕ್ಕಪಕ್ಕದಲ್ಲಿರುವ ಅಂಗಡಿಗಳ ಮಾಲೀಕರು ಹೇಳುತ್ತಿದ್ದಾರಂತೆ. ಬಹಳಷ್ಟು ವ್ಯಾಪಾರಿಗಳು ಆನ್ಲೈನ್ ಸಹವಾಸವೇ ಬೇಡ ಅಂತ ನಗದು ಹಣ ಇಸಿದುಕೊಳ್ಳುತ್ತಿದ್ದಾರೆ.

ಬೆಂಗಳೂರು, ಜುಲೈ 18: ನಮ್ಮ ವರದಿಗಾರನೊಂದಿಗೆ ಮಾತಾಡುತ್ತಿರುವ ಇವರ ಹೆಸರು ಸೋಮೇಗೌಡ, ಬೆಂಗಳೂರು ವಿಶ್ವವಿದ್ಯಾಲಯದ (ಜ್ಞಾನಭಾರತಿ) ಬಳಿಯಿರುವ ಉಲ್ಲಾಳದ ನಿವಾಸಿ. ತಳ್ಳುಬಂಡಿಯಲ್ಲಿ ಹೂವಿನ ವ್ಯಾಪಾರ ಮಾಡುತ್ತಾ ಬದುಕು ನಡೆಸುತ್ತಿರುವ ಸೋಮೇಗೌಡ 2020 ರಿಂದ ಇಲ್ಲಿಯವರೆಗೆ ಮಾಡಿದ ತಪ್ಪೆಂದರೆ, ತಮ್ಮ ಗ್ರಾಹಕರಿಂದ ಆನ್ಲೈನ್ ಪೇಮೆಂಟ್ ಪಡೆದಿರೋದು. ಹಾರ ತೆಗೆದುಕೊಳ್ಳುವವರು, ದೇವರಿಗೆ ಹೂಕೊಳ್ಳುವವರು, ಮುಡಿಗೆ ಹೂ ಅಂತ ಖರೀದಿಸುವವರೆಲ್ಲ ಫೋನ್ ಗಳ ಮೂಲಕ ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದಾರೆ. ಒಂದು ತಿಂಗಳು ಹಿಂದೆ ಕಮರ್ಷಿಯಲ್ ತೆರಿಗೆ ಇಲಾಖೆಯಿಂದ ₹ 50 ಲಕ್ಷ ತೆರಿಗೆ ಪಾವತಿಸುವಂತೆ ಸೋಮೇಗೌಡರಿಗೆ ನೋಟೀಸ್ ಬಂದಿದೆ! ಅವರ ಗೋಳು ಕೇಳಿ.

ಇದನ್ನೂ ಓದಿ:  ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ: ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಗುನ್ನ!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.