ಆಷಾಢ ಮಾಸ: ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಕಾಣಿಕೆ ಸಂಗ್ರಹ

ಆಷಾಢ ಮಾಸ: ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಯಲ್ಲಿ ದಾಖಲೆ ಕಾಣಿಕೆ ಸಂಗ್ರಹ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2022 | 1:59 PM

ಆಷಾಢ ಮಾಸದ ಕಳೆದ 38 ದಿನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿಯಲ್ಲಿ 2 ಕೋಟಿ 33 ಲಕ್ಷದ 51 ಸಾವಿರ ರೂ. ಸಂಗ್ರಹವಾಗಿದೆ.

ಮೈಸೂರು: ಆಷಾಢ ಮಾಸ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Chamundi Hills) ಭಕ್ತ ಸಮೂದಿಂದ ಹಣದ ಹೊಳೆಯನ್ನು ಹರಿಸಿದೆ. ಈ ವಿಡಿಯೋದಲ್ಲಿ ನಿಮಗೆ ಕಾಣುತ್ತಿರುವುದೆಲ್ಲ ಹಣದ ರಾಶಿಯೇ. ಆಷಾಢ ಮಾಸದ (Aashaadha Month) ಕಳೆದ 38 ದಿನಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನದ (Chamundeshwari Temple) ಹುಂಡಿಯಲ್ಲಿ 2 ಕೋಟಿ 33 ಲಕ್ಷದ 51 ಸಾವಿರ ರೂ. ಸಂಗ್ರಹವಾಗಿದೆ. ಮಾಸದ ಶುಕ್ರವಾರಗಳಲ್ಲಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು.