ದಕ್ಷಿಣ ಕನ್ನಡ: ನಿವೃತ್ತ ಸೈನಿಕರೊಬ್ಬರು ಧ್ವಜಾರೋಹಣ ಸಮಯದಲ್ಲಿ ಕುಸಿದುಬಿದ್ದು ಪ್ರಾಣಬಿಟ್ಟರು
ಮೃತ ಸೈನಿಕನ ಹೆಸರು ಗಂಗಾಧರ ಗೌಡ. ಅವರು ಕುಸಿದು ಬೀಳುವುದು ವಿಡಿಯೋನಲ್ಲಿ ಸೆರೆಯಾಗಿದೆ.
ದಕ್ಷಿಣ ಕನ್ನಡ: ಇಡೀ ದೇಶ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ನಿವೃತ್ತ ಸೈನಿಕರೊಬ್ಬರು ಧ್ವಜ ಹಾರಿಸುವ (flag hoisting) ಸಮಯದಲ್ಲೇ ಕುಸಿದು ಬಿದ್ದು ಆಸ್ಪತ್ರೆಗೆ (hospital) ಸಾಗಿಸುವಾಗಲೇ ಕೊನೆಯುಸಿರೆಳೆದ ದಾರುಣ ಮತ್ತು ದುಃಖಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಕುಟ್ರುಪಾಡಿ (Kutrupadi) ಗ್ರಾಮದಲ್ಲಿ ಜರುಗಿದೆ. ಮೃತ ಸೈನಿಕನ ಹೆಸರು ಗಂಗಾಧರ ಗೌಡ. ಅವರು ಕುಸಿದು ಬೀಳುವುದು ವಿಡಿಯೋನಲ್ಲಿ ಸೆರೆಯಾಗಿದೆ.