ದೇವನಹಳ್ಳಿ: ಪ್ರತಿಭಟನೆಗಿಳಿದ ರೈತ ಮುಖಂಡರ ಮೇಲೆ ಪೊಲೀಸರ ಬಲ ಪ್ರದರ್ಶನ

ಮುಖಂಡರು ಕಾಲೇಜಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದಾಗ ಪೊಲೀಸರು ಅವರ ವಿರುದ್ಧ ಬಲ ಪ್ರದರ್ಶನ ನಡೆಸಿದರು. ರೈತರನ್ನು ಬಸ್ಸಿನಲ್ಲಿ ಎಳೆದೊಯ್ದು ತುಂಬಿಸುವಾಗ ಪೊಲೀಸರು ಕೆಲವರನ್ನು ತಮ್ಮ ಲಾಠಿಗಳಿಂದ ತಿವಿದಿದ್ದನ್ನು ವಿಡಿಯೋನಲ್ಲಿ ನೋಡಬಹುದು.

TV9kannada Web Team

| Edited By: Arun Belly

Aug 15, 2022 | 12:08 PM

75 ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ದೇವನಹಳ್ಳಿ (Devanahalli) ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು ಮತ್ತು ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಸದರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರತಿಭಟನೆಗಿಳಿದಿದ್ದ ಈ ಭಾಗದ ರೈತ ಸಂಘಟನೆಗಳ (farmers organisation) ಮುಖಂಡರು ಕಾಲೇಜಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದಾಗ ಪೊಲೀಸರು ಅವರ ವಿರುದ್ಧ ಬಲ ಪ್ರದರ್ಶನ ನಡೆಸಿದರು. ರೈತರನ್ನು ಬಸ್ಸಿನಲ್ಲಿ ಎಳೆದೊಯ್ದು ತುಂಬಿಸುವಾಗ ಪೊಲೀಸರು ಕೆಲವರನ್ನು ತಮ್ಮ ಲಾಠಿಗಳಿಂದ ತಿವಿದಿದ್ದನ್ನು ವಿಡಿಯೋನಲ್ಲಿ ನೋಡಬಹುದು.

Follow us on

Click on your DTH Provider to Add TV9 Kannada