ಮಂಡ್ಯ ಜಿಲ್ಲಾಡಳಿತದ ಮಹಾ ಎಡವಟ್ಟು: ಶಾಲಾ ಮಕ್ಕಳಿಗೆ ಗದರಿದ ಮಂಡ್ಯ ಎಸ್ಪಿ
ಮಂಡ್ಯ ಜಿಲ್ಲಾಡಳಿತದಿಂದ ಮಹಾ ಎಡವಟ್ಟು ಒಂದು ನಡೆದಿದ್ದು, ಶಾಲಾ ಮಕ್ಕಳಿದ ಮಂಡ್ಯ ಎಸ್ಪಿ ಗದರಿರುವಂತಹ ಘಟನೆ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದೆ.
ಮಂಡ್ಯ: ಮಂಡ್ಯ ಜಿಲ್ಲಾಡಳಿತದಿಂದ ಮಹಾ ಎಡವಟ್ಟು ಒಂದು ನಡೆದಿದ್ದು, ಶಾಲಾ ಮಕ್ಕಳಿದ ಮಂಡ್ಯ ಎಸ್ಪಿ (Mandya SP) ಗದರಿರುವಂತಹ ಘಟನೆ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದಿದೆ. ಕಂದಾಯ ಸಚಿವ ಆರ್.ಅಶೋಕ್ರಿಂದ ಧ್ವಜಾರೋಹಣ ನೆರವೇರಿಸಿದರು. ಕಾರ್ಯನಿಮಿತ್ತ ಧ್ವಜಾರೋಹಣ ಬಳಿಕ ಆರ್.ಅಶೋಕ್ ಬೆಂಗಳೂರಿಗೆ ತೆರಳಿದರು. ಈ ಹಿನ್ನಲೆ ಜಿಲ್ಲಾಡಳಿತ ಕಾರ್ಯಕ್ರಮ 40 ನಿಮಿಷಕ್ಕೆ ಕಡಿತಗೊಳಿಸಿದೆ. 75ನೇ ಅಮೃತ ಮಹೋತ್ಸವಕ್ಕೆ ಶಾಲಾ ಮಕ್ಕಳು ಸಿದ್ದಗೊಂಡಿದ್ದರು. ಪಥಸಂಚಲನದ 20 ತಂಡವನ್ನ ಇದ್ದಕ್ಕಿದ್ದಂತೆ ಜಿಲ್ಲಾಡಳಿತ ರದ್ದು ಪಡಿಸಿದೆ. ಕಳೆದೊಂದು ವಾರದಿಂದ ಪಥಸಂಚಲನಕ್ಕಾಗಿ ಶಾಲಾ ಮಕ್ಕಳು ಸಿದ್ದತೆಗೊಂಡಿದ್ದರು. ಇಂದು ಕಾರ್ಯಕ್ರಮ 40 ನಿಮಿಷಕ್ಕೆ ಮಾತ್ರ ಸೀಮಿತ ಹಿನ್ನಲೆ 20 ಶಾಲೆಯ ಮಕ್ಕಳ ಪಥಸಂಚಲನ ಇದ್ದಕ್ಕಿದ್ದಂತೆ ರದ್ದು ಮಾಡಲಾಗಿದೆ. ಇದೇ ವೇಳೆ ಶಾಲಾ ಮಕ್ಕಳು ಕೋಪಗೊಂಡಿದ್ದು, ಕ್ಲಾಸ್ ಬಿಟ್ಟು ಎರಡು ದಿನ ನಾವು ಪಥಸಂಚಲನಕ್ಕೆ ತಯಾರಿ ನಡೆಸಿದ್ದೇವೆ. ನಮಗೆ ಅವಕಾಶ ನೀಡಿ ಎಂದು ಹಠ ಮಾಡಿದರು. ಈ ವೇಳೆ ಅಲ್ಲೇ ಇದ್ದ ಮಂಡ್ಯ ಎಸ್ಪಿ ಮಕ್ಕಳನ್ನು ಗದರಿದರು.
ಇದನ್ನೂ ಓದಿ: Independence Day 2022: ಅನಾಮಧೇಯ ಹೋರಾಟಗಾರರಿಗೆ ಅಮೃತ ಮಹೋತ್ಸವ ಅರ್ಪಣೆ: ಬಸವರಾಜ ಬೊಮ್ಮಾಯಿ