Beegara Oota: ಅಭಿಷೇಕ್-ಅವಿವಾ ವಿವಾಹ ಬೀಗರ ಊಟ ಕಾರ್ಯಕ್ರಮದಲ್ಲೊಬ್ಬ ವಿಶಿಷ್ಟ ಅಂಬರೀಷ್ ಅಭಿಮಾನಿ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 16, 2023 | 6:26 PM

ಅಂಬರೀಷ್ ಅಭಿಮಾನಿ ಅಲಂಕೃತಗೊಂಡ ಒಂದು ಶ್ವೇತವರ್ಣದ ಹಸವನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದರು.

ಮಂಡ್ಯ: ಇಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ಹಾಕಿದ ಬೃಹತ್ ಜರ್ಮನ್ ಹ್ಯಾಂಗರ್ ಟೆಂಟ್ ನಲ್ಲಿ ಅಭಿಷೇಕ್-ಅವಿವಾ (Abhishek-Aviva) ವಿವಾಹ ಪ್ರಯುಕ್ತ ಬೀಗರ ಊಟ ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಜನ ಔತಣಕೂಟದಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಅವರ ಅಪ್ಪಟ ಅಭಿಮಾನಿಯೊಬ್ಬರು ಚೀರನಹಳ್ಳಿಯಿಂದ (Cheeranahalli) ಆಗಮಿಸಿದ್ದರು ಮತ್ತು ಅವರ ಆಗಮನ ಶೈಲಿಯೂ ವಿಶಿಷ್ಟವಾಗಿತ್ತು. ಅಲಂಕೃತಗೊಂಡ ಒಂದು ಶ್ವೇತವರ್ಣದ ಹಸವನ್ನು ಅವರು ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದರು. ಅದರ ಹಣೆಯ ಮೇಲೆ ಅಂಬರೀಷ್ ಮತ್ತು ಸುಮಲತಾ ಪೋಟೋ, ಎಡಭಾಗದಲ್ಲಿ ಅಭಿಷೇಕ್ ಮತ್ತು ಅವಿವಾ ಅವರಿಗೆ ಶುಭಕೋರುವ ಬರಹ ಮತ್ತು ಫೋಟೋ ಹಾಗೂ ಬಲಭಾಗದಲ್ಲಿ ತಮ್ಮ ಹೆಸರು ಮತ್ತು ವಿಳಾಸವನನ್ನು ಪೇಂಟ್ ಮಾಡಿಸಿದ್ದರು. ಅವರ ಅಭಿಮಾನ ನಿಜಕ್ಕೂ ವಿಶಿಷ್ಟವಾದದ್ದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.