ಪುತ್ತೂರಿನಲ್ಲಿ ವೇಗವಾಗಿ ಬಂದ ಕಾರು ಹೊಳೆಗೆ ಬಿದ್ದೇ ಬಿಡ್ತು! ಭಯಾನಕ ವಿಡಿಯೋ ಇಲ್ಲಿದೆ
ಮೂರು ಕಬ್ಬಿಣ ಕಂಬಗಳು ಮುರಿದು ನೇತಾಡುತ್ತಿವೆ. ಕಾರು ಮತ್ತು ಕಾರಿನಲ್ಲಿದ್ದವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸೇತುವೆಯ (Bridge) ತಡೆಗೋಡೆಗೆ ಡಿಕ್ಕಿಯಾಗಿ ಕಾರೊಂದು (Car) ಹೊಳೆಗೆ ಬಿದ್ದಿದೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು ಬಳಿ ತಡರಾತ್ರಿ ಸಂಭವಿಸಿದೆ. ಮಧ್ಯರಾತ್ರಿ ವೇಳೆ ಭಾರೀ ವೇಗವಾಗಿ ಬಂದ ಕಾರು ಉಕ್ಕಿ ಹರಿಯುವ ಹೊಳೆಗೆ ಬಿದ್ದಿದೆ. ಕಾರಿನಲ್ಲಿದ್ದವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಅಪಘಾತದ ವೇಗಕ್ಕೆ ಸೇತುವೆಯ ತಡೆ ಬೇಲಿ ಜಖಂ ಆಗಿದೆ. ಮೂರು ಕಬ್ಬಿಣ ಕಂಬಗಳು ಮುರಿದು ನೇತಾಡುತ್ತಿವೆ. ಕಾರು ಮತ್ತು ಕಾರಿನಲ್ಲಿದ್ದವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
Published on: Jul 10, 2022 11:08 AM