ತುಮಕೂರಿನ ತಗ್ಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಅಪರೂಪದ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ. ವಿಚಿತ್ರ ಪ್ರಾಣಿ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಸಂಚರಿಸುತ್ತಿದ್ದು ವಿರಿಯೋ ವೈರಲ್ ಆಗಿದೆ. ಇದುವರೆಗೂ ಇಂತಹ ಪ್ರಾಣಿ ನೋಡಿಲ್ಲ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರು, ಜ.03: ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಪ್ರಾಣಿಗಳು ಅಪಾರ. ಹೀಗೆ ನಾಡಿಗೆ ಬಂದ ಕಾಡುಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿರುವ ಅದೆಷ್ಟೋ ಘಟನೆಗಳು ನಡೆದಿವೆ. ಸದ್ಯ ಇದೀಗ ತಗ್ಗಿಹಳ್ಳಿ ಅರಣ್ಯ ಭಾಗಕ್ಕೆ ಹೊಸ ಪ್ರಾಣಿಯೊಂದು ಎಂಟ್ರಿ ಕೊಟ್ಟಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಅಪರೂಪದ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ. ಆನೆಯಂತೆ ಉದ್ದ ಬಾಯಿ ಇರುವ ಈ ವಿಚಿತ್ರ ಪ್ರಾಣಿ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಸಂಚರಿಸುತ್ತಿದ್ದು ವಿರಿಯೋ ವೈರಲ್ ಆಗಿದೆ. ಇದುವರೆಗೂ ಇಂತಹ ಪ್ರಾಣಿ ನೋಡಿಲ್ಲ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಾಣಿ ಮನುಷ್ಯರಿಗೆ ಹಾನಿ ಮಾಡುತ್ತಾ? ಇದು ಸಸ್ಯಹಾರಿನಾ, ಮಾಂಸಹಾರಿನಾ ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ