Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ ಜಿಲ್ಲೆಯಲ್ಲಿ 43 ಖೊಟ್ಟಿ ವೈದ್ಯರ ಕ್ಲಿನಿಕ್​ಗಳನ್ನು ಬಂದ್ ಮಾಡಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು

ಕಲಬುರಗಿ ಜಿಲ್ಲೆಯಲ್ಲಿ 43 ಖೊಟ್ಟಿ ವೈದ್ಯರ ಕ್ಲಿನಿಕ್​ಗಳನ್ನು ಬಂದ್ ಮಾಡಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 03, 2024 | 10:40 AM

ಕ್ವ್ಯಾಕ್​ಗಳು ವೃತ್ತಿಪರ ಡಾಕ್ಟರ್ ಗಳ ಕ್ಲಿನಿಕ್​ಗಳಲ್ಲಿ ಸಹಾಯಕರಾಗಿ (ಗ್ರಾಮಗಳಲ್ಲಿ ಜನ ಅವರನ್ನು ಕಂಪೌಂಡರ್ ಅಂತ ಕರೆಯುತ್ತಾರೆ) ಕೆಲಸ ಮಾಡುತ್ತಾ ಚುಚ್ಚುಮದ್ದು ನೀಡುವುದು ಕಲಿಯುವುದರ ಜೊತೆಗೆ, ಸಾಮಾನ್ಯ ಜ್ವರ, ಶೀತ, ಮೈಕೈನೋವುಗಳಿಗೆ ವೈದ್ಯರು ಪ್ರಿಸ್ಕ್ರೈಬ್ ಮಾಡುವ ಔಷಧಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

ಕಲಬುರಗಿ: ಖೊಟ್ಟಿ ವೈದ್ಯರು ಇಂಗ್ಲಿಷ್ ಭಾಷೆಯಲ್ಲಿ ಇವರನ್ನು ಕ್ವ್ಯಾಕ್ (quack) ಅನ್ನುತ್ತಾರೆ-ಕೇವಲ ಕಲಬುರಗಿ (Kalaburagi) ಮಾತ್ರವಲ್ಲ ದೇಶದ ಎಲ್ಲ ಕಡೆ ಸಿಗುತ್ತಾರೆ. ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Health and Family Welfare department) ಅಧಿಕಾರಿಗಳು ಜಿಲ್ಲೆಯಾದ್ಯಂತ ದಾಳಿ ನಡೆಸಿ ಅಧಿಕೃತವಲ್ಲದ ಯಾವುದೋ ಸರ್ಟಿಫಿಕೇಟ್ ತೂಗು ಹಾಕಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವ ಅಪಾಯಕಾರಿ ಧಂದೆ ಮಾಡುತ್ತಾ ಅವರ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿದ್ದ ಹಲವಾರು ನಕಲಿ ವೈದ್ಯರ ಕ್ಲಿನಿಕ್ ಗಳನ್ನು ಬಂದ್ ಮಾಡಿಸಿದ್ದಾರೆ. ಇಂಥ ನಕಲಿ ವೈದ್ಯರ ಮೋಡಸ್ ಆಪರಂಡಿ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ. ಯಾವುದಾದರೂ ವೃತ್ತಿಪರ ಡಾಕ್ಟರ್ ಗಳ ಕ್ಲಿನಿಕ್ ಗಳಲ್ಲಿ ಸಹಾಯಕರಾಗಿ (ಗ್ರಾಮಗಳಲ್ಲಿ ಜನ ಅವರನ್ನು ಕಂಪೌಂಡರ್ ಅಂತ ಕರೆಯುತ್ತಾರೆ) ಕೆಲಸ ಮಾಡುತ್ತಾ ಚುಚ್ಚುಮದ್ದು ನೀಡುವುದು ಕಲಿಯುವುದರ ಜೊತೆಗೆ, ಸಾಮಾನ್ಯ ಜ್ವರ, ಶೀತ, ಮೈಕೈನೋವುಗಳಿಗೆ ವೈದ್ಯರು ಪ್ರಿಸ್ಕ್ರೈಬ್ ಮಾಡುವ ಔಷಧಿಗಳ ಬಗ್ಗೆ ತಿಳಿದುಕೊಳ್ಳುತ್ತಾರೆ.

ಅಲ್ಲಿಂದ ಹೊರಬಂದು ಒಂದು ಆರ್ ಎಂ ಪಿ (RMP) ಸರ್ಟಿಫೀಕೇಟ್ ತರಿಸಿಕೊಳ್ಳುತ್ತಾರೆ. ಇವು ರೂ. 1,500-2,000 ಕೊಟ್ಟರೆ ಸಿಗುವ ಪ್ರಮಾಣ ಪತ್ರಗಳು. ಅದು ಸಿಕ್ಕ ಮೇಲೆ ತಮ್ಮ ಹೆಸರಿನ ಹಿಂದೆ ಡಾಕ್ಟರ್ ಮತ್ತು ಮುಂದೆ ಆರ್ ಎಂಪಿ ಅಂತ ಬರೆಸಿದ ಬೋರ್ಡನ್ನು ತೂಗು ಹಾಕ್ಕೊಂಡು ‘ವೈದ್ಯಕೀಯ ವೃತ್ತಿ’ ಶುರುಮಾಡುತ್ತಾರೆ. ಇಂಥ 43 ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಅವುಗಳನ್ನು ಸೀಲ್ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ