ಚಿಕ್ಕಮಗಳೂರಲ್ಲಿ ಕೊನೆಗಾಣದ ಆನೆ ಉಪಟಳ; ಮೂಡಿಗೆರೆ ರಸ್ತೆ ಬಳಿ ಕಾಣಿಸಿಕೊಂಡ ಒಂಟಿ ಸಲಗ

ಚಿಕ್ಕಮಗಳೂರಲ್ಲಿ ಕೊನೆಗಾಣದ ಆನೆ ಉಪಟಳ; ಮೂಡಿಗೆರೆ ರಸ್ತೆ ಬಳಿ ಕಾಣಿಸಿಕೊಂಡ ಒಂಟಿ ಸಲಗ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 03, 2024 | 12:03 PM

ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಅರಣ್ಯಪ್ರದೇಶಕ್ಕೆ ಹತ್ತಿರದ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರು ಜಾಗರೂಕರಾಗಿರಬೇಕೆಂಬ ಎಚ್ಚರಿಕೆಯನ್ನು ಧ್ವನಿವರ್ಧಕದ ಮೂಲಕ -ಸಾರುವ ಪರಿಸ್ಥಿತಿ ಎದುರಾಗಿದೆ.

ಚಿಕ್ಕಮಗಳೂರು: ವರ್ಷಗಳ ಹಿಂದೆ ಮಲೇರಿಯಾ ರೋಗ ನಿರ್ಮೂಲನೆ ಅಭಿಯಾನ ನಡೆಸುತ್ತಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಸೊಳ್ಳೆಗಳನ್ನು ಓಡಿಸಿ ಮಲೇರಿಯಾದಿಂದ (Malaria) ಬಚಾವಾಗಿ ಎಂಬ ಸ್ಲೋಗನ್ ಗ್ರಾಮಾಂತರ ಭಾಗಗಳಲ್ಲಿನ ಗೋಡೆಗಳ ಮೇಲೆ ಬರೆದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ (districts of Hassan and Chikmagalur) ಅರಣ್ಯಪ್ರದೇಶಕ್ಕೆ ಹತ್ತಿರದ ಗ್ರಾಮಗಳಲ್ಲಿ ಕಾಡಾನೆಗಳ (wild elephants) ಉಪಟಳ ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರು ಜಾಗರೂಕರಾಗಿರಬೇಕೆಂಬ ಎಚ್ಚರಿಕೆಯನ್ನು ಧ್ವನಿವರ್ಧಕದ ಮೂಲಕ -ಸಾರುವ ಪರಿಸ್ಥಿತಿ ಎದುರಾಗಿದೆ. ಮೂಡಿಗೆರೆ-ಚಿಕ್ಕಮಗಳೂರು ಮಾರ್ಗದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ರಸ್ತೆ ಬದಿಯಲ್ಲೇ ಸಲಗ ಓಡಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆನೆ ಗ್ರಾಮಗಳಿಗೆ ಸಾಧ್ಯತೆ ಇಲ್ಲದಿಲ್ಲ, ಹಾಗಾಗೇ ಜನರನ ಎಚ್ಚರದಿಂದ ಇರುವಂತೆ ಆಲ್ದೂರು ಅರಣ್ಯ ಇಲಾಖೆ ಮತ್ತು ಮೂಡಿಗೆರೆಯ ಆನೆ ಟಾಸ್ಕ್ ಫೋರ್ಸ್ ಸಿಬ್ಬಂದಿ ವಾಹನವೊಂದರರಲ್ಲಿ ಸಂಚರಿಸುತ್ತಾ ಧ್ವನಿವರ್ಧಕದ ಮೂಲಕ ಸಾರುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ