ಪಕ್ಷದ ಕಾರ್ಯಕರ್ತರೇ ಪಕ್ಷದ ಬೆನ್ನಲುಬು, ಸಂಘಟನೆಯೇ ನಮ್ಮ ಪಕ್ಷದ ಬಲ: ಬಸವರಾಜ ಬೊಮ್ಮಾಯಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 07, 2022 | 8:27 PM

ಸಂಘಟನೆಯೇ ನಮ್ಮ ಪಕ್ಷದ ಬಲ, ಕರ್ನಾಟಕದಲ್ಲಿ ಒಂದು ಕೋಟಿಗೂ ಹೆಚ್ಚು ಕಾರ್ಯಕರ್ತರಿದ್ದಾರೆ, ಅವರೇ ನಮ್ಮ ಪಕ್ಷದ ಬೆನ್ನೆಲುಬು ಅವರೆಲ್ಲರ ವಿಶ್ವಾಸ ಉಳಿಸಿಕೊಳ್ಳುವುದು ಪಕ್ಷದ ಆದ್ಯತೆಯಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಬೆಂಗಳೂರು: ಬೇರೆ ಬೇರೆ ಪಕ್ಷಗಳ ನಾಯಕರು ಶನಿವಾರ ಬಿಜೆಪಿಯನ್ನು ಸೇರಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮುಖದಲ್ಲಿ ಗೆಲುವಿನ ಕಳೆ ತರಿಸಿತ್ತು. ಖಾಸಗಿ ಹೋಟೆಲೊಂದರಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತಾಡಿದ ಬೊಮ್ಮಾಯಿ ಅವರು ಜನರಲ್ಲಿ ದೊಡ್ಡ ಬದಲಾವಣೆ (massive change) ಬರುತ್ತಿದೆ, ಕರ್ನಾಟಕದಾದ್ಯಂತ ಬೇರೆ ಜಿಲ್ಲೆಗಳಲ್ಲಿ ಜನ ಬಿಜೆಪಿಯನ್ನು ಸೇರುತ್ತಿದ್ದಾರೆ, ಅವರಿಗೆ ನಮ್ಮ ಕಾರ್ಯಕ್ರಮಗಳು ಇಷ್ಟವಾಗುತ್ತಿವೆ. ಇನ್ನೂ ವಿವಿಧ ಯೋಜನೆಗಳನ್ನು ನಾವು ಆರಂಭಿಸಲಿದ್ದೇವೆ ಎಂದು ಹೇಳಿದರು. 5 ರಾಜ್ಯಗಳ ವಿಧಾನ ಸಭಾ ಚುನಾವಣೆ (Assembly polls) ಫಲಿತಾಂಶಗಳು ಬಂದ ನಂತರ ವಿರೋಧ ಪಕ್ಷಗಳ ಹಲವಾರು ಶಾಸಕರು ತಮ್ಮನ್ನು ಭೇಟಿಯಾಗಿದ್ದರು. ಏನು ಮಾಡಬೇಕು ಅಂತ ನಮಗೆ ಗೊತ್ತಾಗುತ್ತಿಲ್ಲ, ದಯವಿಟ್ಟು ಮಾರ್ಗದರ್ಶನ ಮಾಡಿ ಅಂತ ಹೇಳಿದ್ದರು. ಸಂಯಮದಿಂದ ಇರುವಂತೆ ನಾನು ಅವರಿಗೆ ಹೇಳಿದ್ದೆ ಎಂದು ಬೊಮ್ಮಯಿ ಹೇಳಿದರು.

ಸಂಘಟನೆಯೇ ನಮ್ಮ ಪಕ್ಷದ ಬಲ, ಕರ್ನಾಟಕದಲ್ಲಿ ಒಂದು ಕೋಟಿಗೂ ಹೆಚ್ಚು ಕಾರ್ಯಕರ್ತರಿದ್ದಾರೆ, ಅವರೇ ನಮ್ಮ ಪಕ್ಷದ ಬೆನ್ನೆಲುಬು ಅವರೆಲ್ಲರ ವಿಶ್ವಾಸ ಉಳಿಸಿಕೊಳ್ಳುವುದು ಪಕ್ಷದ ಆದ್ಯತೆಯಾಗಿದೆ. ಅವರು ಸಂತೋಷವಾಗಿದ್ದರೆ ಮಾತ್ರ ನಾವು ಸಂತೋಷವಾಗರುತ್ತೇವೆ, ಪಕ್ಷದ ಸ್ವಾಸ್ಥ್ಯ ಚೆನ್ನಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಸೇರ್ಪಡೆಗೊಂಡಿರುವ ಎಲ್ಲರಿಗೂ ನಾನು ಸ್ವಾಗತ ಕೋರುತ್ತೇನೆ. ಇನ್ನು ಮುಂದೆ ಇವರು ನಮ್ಮವರು. ಹೊರಗಿನವರು ಹೊಸಬರು, ಬೇರೆ ಪಕ್ಷದಿಂದ ಬಂದವರು ಎಂಬ ತಾರತಮ್ಯವಿಲ್ಲ. ನಾವೆಲ್ಲ ಒಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಕೈ ಬಲಪಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:    ದೇಶವನ್ನು ಒಗ್ಗೂಡಿಸುವ, ಮುನ್ನಡೆಸುವ ಶಕ್ತಿ ಕೇವಲ ಪ್ರಧಾನಿ ಮೋದಿ ಮತ್ತು ಬಿಜೆಪಿಗಿದೆ: ಪ್ರಮೋದ್ ಮಧ್ವರಾಜ್