ಪ್ರಜ್ವಲ್ ರೇವಣ್ಣ ಅಂತ ಹೇಳಲಿಚ್ಛಿಸದ ಪ್ರೀತಂಗೌಡ, ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಅನ್ನುತ್ತಾರೆ!
ಅವರು ಮಾತಾಡುವ ವೈಖರಿಯನ್ನು ಗಮನಿಸಿ. ಪ್ರಜ್ವಲ್ ರೇವಣ್ಣ ಹೆಸರು ಅವರ ಬಾಯಲ್ಲಿ ಬರೋದೇ ಇಲ್ಲ, ಎನ್ ಡಿ ಎ ಅಭ್ಯರ್ಥಿ ಅನ್ನುತ್ತಾರೆ! ಕಾರ್ಯಕರ್ತರೆಲ್ಲ ಹುಮ್ಮಸ್ಸಿನಿಂದ ಕೆಲಸ ಮಾಡಿ ಎನ್ ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದನ್ನು ನೋಡುವುದೇ ತಮ್ಮ ಗುರಿಯಾಗಿದೆ ಅಂತ ಪ್ರೀತಂ ಗೌಡ ಹೇಳುತ್ತಾರೆ.
ಮೈಸೂರು: ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂ ಗೌಡ (Preetham Gowda) ಮತ್ತು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ನಡುವೆ ಇದುವರೆಗೆ ಸಮನ್ವಯತೆ ಏರ್ಪಟ್ಟಿಲ್ಲ. ಪ್ರೀತಂ ಇಲ್ಲಿಯವರೆಗೆ ಪ್ರಜ್ವಲ್ ರನ್ನು ಭೇಟಿಯಾಗಿಲ್ಲ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅವರ ಆಪ್ತರು ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಇಂದು ಮೈಸೂರಲ್ಲಿದ್ದ ಪ್ರೀತಂ ಗೌಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವ ಬರೀ ಹಾರಿಕೆಯ ಉತ್ತರಗಳನ್ನು ನೀಡಿ ಅವರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ತನ್ನ ಮುನಿಸಿನ ಬಗ್ಗೆ ಹರಡಿರುವ ವದಂತಿಗಳು ಆಧಾರರಹಿತ, ಇಂದು ರಾತ್ರಿ ಹಾಸನಕ್ಕೆ ಹೋಗಿ ನಾಳೆ ಹಬ್ಬದ ಬಳಿಕ ಕಾರ್ಯಕರ್ತರ ಸಭೆ (party workers meet) ಕರೆದು ಎನ್ ಡಿಎ ಅಭ್ಯರ್ಥಿಯ ಪ್ರಚಾರ ಮತ್ತು ಗೆಲುವಿಗೆ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಒಬ್ಬ ಬೂತ್ ಮಟ್ಟದ ಅಧ್ಯಕ್ಷನೂ ಅಲ್ಲ, ಅವನು ತಮ್ಮ ಕಾರ್ಯಕರ್ತನೇ ಅಲ್ಲವೆಂದು ಅವರು ಹೇಳಿದರು. ಅವರು ಮಾತಾಡುವ ವೈಖರಿಯನ್ನು ಗಮನಿಸಿ. ಪ್ರಜ್ವಲ್ ರೇವಣ್ಣ ಹೆಸರು ಅವರ ಬಾಯಲ್ಲಿ ಬರೋದೇ ಇಲ್ಲ, ಎನ್ ಡಿ ಎ ಅಭ್ಯರ್ಥಿ ಅನ್ನುತ್ತಾರೆ! ಕಾರ್ಯಕರ್ತರೆಲ್ಲ ಹುಮ್ಮಸ್ಸಿನಿಂದ ಕೆಲಸ ಮಾಡಿ ಎನ್ ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದನ್ನು ನೋಡುವುದೇ ತಮ್ಮ ಗುರಿಯಾಗಿದೆ ಅಂತ ಪ್ರೀತಂ ಗೌಡ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಸನ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ ಮೌಲ್ಯ ನಾಲ್ಕು ಪಟ್ಟು ಹೆಚ್ಚಳ; ಎಷ್ಟು ಗೊತ್ತಾ?