Vijayapura: ತಪ್ಪುತಪ್ಪಾಗಿ ಇಂಗ್ಲೀಷ್ ಪಾಠ ಮಾಡಿದ ಶಿಕ್ಷಕ, ವಿಡಿಯೋ ವೈರಲ್
Teacher: ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಶಿಕ್ಷಕೋರ್ವರು ಮಕ್ಕಳಿಗೆ ತಪ್ಪಾಗಿ ಇಂಗ್ಲೀಷ್ ವರ್ಣಮಾಲೆಯನ್ನು ಬೋಧಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕರ ಅಮಾನತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯಪುರ: ಎಬಿಸಿಡಿ ಸರಿಯಾಗಿ ಓದಲು ಬರೆಯಲು ಬಾರದ ಶಿಕ್ಷಕರೋರ್ವರು ಇಂಗ್ಲೀಷ್ ಪಾಠ ಮಾಡುವ ವಿಡಿಯೋ ವೈರಲ್ ಆಗಿದೆ. ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ಗುಂದಗಿ ಗ್ರಾಮದ ದೌಲತ್ ದೇವಕುಳೇ ಎಂಬ ಶಿಕ್ಷಕರೊಬ್ಬರು, ಇಂಗ್ಲಿಷ್ ವರ್ಣಮಾಲೆ ಬಾರದಿದ್ದರೂ ಮಕ್ಕಳಿಗೆ ಪಾಠ ಮಾಡಿದ್ದಾರೆ. ವಿಡಿಯೋದಲ್ಲಿ ತಪ್ಪುತಪ್ಪಾಗಿ ಎಬಿಸಿಡಿ ಬರೆಯುತ್ತಿರುವುದು ಸೆರೆಯಾಗಿದೆ. ತಪ್ಪನ್ನು ಮಕ್ಕಳೇ ಎತ್ತಿಹಿಡಿದು ಸರಿಪಡಿಸುವುದೂ ಕೂಡ ವಿಡಿಯೋದಲ್ಲಿದೆ. ಶಿಕ್ಷಕನನ್ನು ಸ್ಥಳೀಯರು ತರಾಟೆ ತೆಗೆದುಕೊಂಡಿದ್ದು, ಮೊದಲು ಎಬಿಸಿಡಿ ಬರೆದು ತೋರಿಸಿ ಎಂದು ಪಟ್ಟುಹಿಡಿದಿದ್ದಾರೆ. ಎಬಿಸಿಡಿ ಬಾರದ ಶಿಕ್ಷಕನನ್ನು ಅಮಾನತು ಮಾಡುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
NEET 2021 Results: ನೀಟ್ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ಅನುಮತಿ; ರಿಸಲ್ಟ್ ನೋಡಲು ಹೀಗೆ ಮಾಡಿ
ಅಂಗಡಿಯಲ್ಲಿ ಖರೀದಿಸಿದ ಖಾರದ ತಿಂಡಿ ಪ್ಯಾಕೆಟ್ನಲ್ಲಿ ಸತ್ತ ಹಲ್ಲಿ ಪತ್ತೆ!