ಕೊಲೆಯಾದ ರೌಡಿ ಆನಂದನಿಗೆ ಏರಿಯಾಗೆ ವೆಲ್ ಕಂ ಹೇಗಿತ್ತು ಗೊತ್ತಾ? ಅವನ ಹವಾ ನೋಡಿದ್ರೆ ಶಾಕ್ ಆಗ್ತೀರಾ

ಕೊಲೆಯಾದ ರೌಡಿ ಆನಂದನಿಗೆ ಏರಿಯಾಗೆ ವೆಲ್ ಕಂ ಹೇಗಿತ್ತು ಗೊತ್ತಾ? ಅವನ ಹವಾ ನೋಡಿದ್ರೆ ಶಾಕ್ ಆಗ್ತೀರಾ

TV9 Web
| Updated By: ಆಯೇಷಾ ಬಾನು

Updated on: Oct 28, 2021 | 10:56 AM

ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಡಾನ್ ಅಂತ ಮೆರೆದವರೆಲ್ಲಾ ಮಣ್ಣು ಸೇರುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಭೀಕರವಾಗಿ ಕೊಲೆಯಾದ ರೌಡಿಶೀಟರ್ ಆನಂದನ ಹವಾ ಹೇಗಿತ್ತು ಅನ್ನೋದನ್ನ ನೋಡಿದ್ರೆ ನೀವು ದಂಗಾಗಿಹೋಗ್ತೀರಿ.

ಬೆಂಗಳೂರು: ರೌಡಿಸಂ, ದಾದಾಗಿರಿಗಾಗಿ ಏರಿಯಾಗಳಲ್ಲಿ ಬಿಲ್ಡಪ್ ಮಾಡ್ತಿದ್ರು. ಏರಿಯಾಗೆ ಎಂಟ್ರಿ ಕೊಟ್ಟ ನಟೋರಿಯಸ್ ರೌಡಿಗೆ ವೆಲ್​ ಕಂ ಮಾಡಲು ಇಡಿ ಏರಿಯಾವೇ ಹಬ್ಬದ ಸಂಭ್ರಮದಲ್ಲಿತ್ತು. ಊರೆಲ್ಲಾ ಪಟಾಕಿ, ಯುವಕರ ಬೈಕ್ ಸವಾರಿ, ಅಣ್ಣನ ವೆಲ್ ಕಂ ಮಾಡೊಕೆ ಇಡಿ ಏರಿಯಾಗೆ ಬಿರಿಯಾನಿ ಹಂಚಲಾಗಿತ್ತು. ಆದ್ರೆ ಮರು ದಿನ ನಡೆದ ಘಟನೆಯಿಂದ ಅಣ್ಣನ ಹುಡುಗರೇ ಶಾಕ್ ಆಗಿದ್ದಾರೆ. ಹಬ್ಬಕ್ಕೆ ತಂದ ಕುರಿಗೆ ಪೂಜೆ ಬಳಿಕ ಕೊಲ್ಲೋ ಹಾಗೆ ರೌಡಿಶೀಟರ್ ಆನಂದನ ಹತ್ಯೆಯಾಗಿದೆ.

ರೌಡಿಶೀಟರ್ ಆನಂದ ಏರಿಯಾಗೆ ಎಂಟ್ರಿ ಕೊಟ್ಟ ದಿನ ಏರಿಯಾದ ಮಂದಿಯಿಂದ ಆರತಿ ಮಾಡಿಸಿಕೊಂಡಿದ್ದ. ಆದ್ರೆ ಮರುದಿನ ಅದೇ ಏರಿಯಾದಲ್ಲಿ ಬೀದಿ ಹೆಣವಾಗಿದ್ದಾನೆ. ಮುಖ ಗುರುತು ಸಿಗದ ಹಾಗೆ ಹಲ್ಲೆ ಮಾಡಲಾಗಿದೆ. ಹಳೆ ದ್ವೇಷಕ್ಕೆ ಡಾನ್ ಆಗಲು ಬಂದವನು ಬೀದಿ ಹೆಣವಾಗಿದ್ದಾನೆ. ರೌಡಿಸಂ ಜೊತೆಗೆ ಏರಿಯಾದಲ್ಲಿ ಹವಾ ಇಡಲು ಮುಂದಾಗಿದ್ದ ರೌಡಿಶೀಟರ್ ಆನಂದ್​ಗೆ ಆವನ ಸಹಕರರು ಸಲಗ ಮೂವಿ ಸಾಂಗ್ ನಲ್ಲಿ ಗ್ರ್ಯಾಂಡ್ ವೆಲ್ ಕಂ ಮಾಡಿದ್ದರು. ಈ ವಿಡಿಯೋಗಳು ಲಭ್ಯವಾಗಿವೆ.

18 ವರ್ಷಕ್ಕೆ ಕೊಲೆ ಮಾಡಿ ಜೈಲಿಗೆ ಹೊಗಿದ್ದ ಆನಂದ್ ಬಳಿಕ 2016ರಲ್ಲಿ ಸುಪಾರಿ ಪಡೆದು ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ. ನಂತರ ಮಾರ್ಚ್ ತಿಂಗಳಲ್ಲಿ ಕಿಡ್ನಾಪ್ ಕೇಸ್ ನಲ್ಲಿ ಜೈಲು ಸೇರಿದಾತ ಎರಡೇ ತಿಂಗಳಲ್ಲಿ ರಿಲೀಸ್ ಆಗಿದ್ದ. ಈ ನಡುವೆ ಚನ್ನರಾಯಪಟ್ಟಣದ ಊರಿಗೆ ಶಿಫ್ಟ್ ಆಗಿ ಸೆಟಲ್ ಆಗಿದ್ದ.