ಕೊಡಗು: ರೆಸಾರ್ಟ್ನವರು ತೋಡಿಸಿದ್ದ ಶೌಚಾಲಯ ಗುಂಡಿಗೆ ಬಿದ್ದರೂ ಸಾವರಿಸಿಕೊಂಡು ಮೇಲೆದ್ದು ಬಂದ ಒಂಟಿ ಸಲಗ
ಅರಣ್ಯ ಇಖಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ನಿಜವಾದರೂ ಆನೆಗೆ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಹೊಣೆ ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಗಲ್ಲ. ಗುಂಡಿ ಆಳವಾಗೇನೂ ಇಲ್ಲ ಅದರೆ, ಆದರೆ ಆನೆ ಭಾರೀ ಗಾತ್ರ ಮತ್ತು ತೂಕದ ಪ್ರಾಣಿ, ಗುಂಡಿಗೆ ಬೀಳುವಾಗ ದೇಹಭಾರಕ್ಕೆ ಕಾಲು ಫ್ರ್ಯಾಕ್ಚರ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗಲ್ಲ, ಗುಂಡಿ ತೋಡಿಸಿ ಮುಚ್ಚದಿರುವುದು ತಪ್ಪು.
ಕೊಡಗು, ಜುಲೈ 23: ಕಾಡಾನೆಯೊಂದು ಶೌಚಾಲಯದ ಗುಂಡಿಗೆ (dug hole) ಬಿದ್ದು ಒದ್ದಾಡಿದ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಚೇಲಾವರ ಗ್ರಾಮದಲ್ಲಿ ನಡೆದಿದೆ. ನಮ್ಮ ಕೊಡಗು ವರದಿಗಾರ ನೀಡುವ ಮಾಹಿತಿಯ ಪ್ರಕಾರ ಹತ್ತಿರದಲ್ಲೇ ಇರುವ ರೆಸಾರ್ಟ್ ಒಂದರ ಮಾಲೀಕ ಶೌಚಾಲಯ ಪಿಟ್ ತೋಡಿಸಿ, ಕಟ್ಟಿಸಿ ಅದನ್ನು ಮುಚ್ಚದೆ ಹಾಗೇ ಬಿಟ್ಟಿದ್ದಾರೆ. ತಿರುಗಾಡುತ್ತ ಗುಂಡಿ ಬಳಿ ಬಂದಿರು ಒಂಟಿ ಸಲಗವು ಅದರಲ್ಲಿ ಬಿದ್ದುಬಿಟ್ಟಿದೆ. ಆದರೆ ಗುಂಡಿಗೆ ಬಿದ್ದ ಆನೆ ಧೃತಿಗೆಟ್ಟಿಲ್ಲ, ತನ್ನ ವಿವೇಕವನ್ನು ಬಳಸಿ ಒದ್ದಾಡುತ್ತ ಕೊಸರಾಡುತ್ತ ಮೇಲೆ ಬಂದುಬಿಟ್ಟಿದೆ. ನಂತರ ಅದು ಏನೂ ನಡೆದೇ ಇಲ್ಲವೆಂಬಂತೆ ಕಾಡಿನಲ್ಲಿ ನಡೆದುಹೋಗುವುದನ್ನು ನೋಡಬಹುದು.
ಇದನ್ನೂ ಓದಿ: ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ