ಕಾಂಗ್ರೆಸ್ ಕಾರ್ಯಕರ್ತರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಶಿವಕುಮಾರ್ಗೆ ತಾಕೀತು ಮಾಡಿದ ವಿಜಯೇಂದ್ರ
ಪ್ರತಿಭಟನೆ ಮಾಡೋದು ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಕಿದ್ದರೆ ಅದಕ್ಕೆಂದೇ ಮೀಸಲಾಗಿರುವ ಫ್ರೀಡಂ ಪಾರ್ಕ್ಗೆ ಹೋಗಲಿ, ರಾಜ್ಯದ ಉಚ್ಚ ನ್ಯಾಯಾಲಯ ಕೂಡ ಅದನ್ನೇ ಹೇಳಿದೆ, ಪ್ರತಿಭಟನೆನ ನೆಪದಲ್ಲಿ ನಮ್ಮ ಕಚೇರಿಯ ಮುಂದೆ ಗೂಂಡಾವರ್ತನೆ ಮಾಡುತ್ತಿದ್ದಾರೆಂದು ಈಗಾಗಲೇ ನಗರ ಪೊಲೀಸ್ ಕಮೀಷನರ್ ಅವರಿಗೆ ಮನವಿಯನ್ನೂ ನಾವು ಸಲ್ಲಿಸಿದ್ದೇವೆ ಎಂದು ವಿಜಯೇಂದ್ರ ಹೇಳಿದರು.
ಬೆಂಗಳೂರು, ಜುಲೈ 23: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸುವ ಭರದಲ್ಲಿ ದಾಂಧಲೆ ಮಾಡುವ ಸಂದರ್ಭಗಳು ಹೆಚ್ಚಾಗುತ್ತಿವೆ, ಇದು ಸರಿಯಲ್ಲ, ತಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಆಗ್ರಹಿಸಿದರು. ಬಿಜೆಪಿ ಕಾರ್ಯಕರ್ತರು ದುರ್ಬಲರೇನೂ ಅಲ್ಲ, ಪೊಲೀಸರ ಕಾವಲನ್ನು ಧಿಕ್ಕರಿಸಿ ಕೆಪಿಸಿಸಿ ಕಚೇರಿಗೆ ನುಗ್ಗುವ ಎದೆಗಾರಿಕೆ ಅವರಿಗಿದೆ, ಅಂಥ ಸನ್ನಿವೇಶಗಳು ಸೃಷ್ಟಿಯಾಗದಂತೆ ತಡೆಯುವ ಕೆಲಸವನ್ನು ಕೆಪಿಸಿಸಿ ಅಧ್ಯಕ್ಷರು ಮಾಡಲಿ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಬಿಜೆಪಿ ಬಣ ರಾಜಕೀಯ: ದೆಹಲಿಯಲ್ಲಿ ತಂತ್ರ-ಪ್ರತಿತಂತ್ರ! ವಿಜಯೇಂದ್ರ ವಿರುದ್ಧ ಮತ್ತೆ ದೂರು ನೀಡಲಿದೆ ಭಿನ್ನರ ಬಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ