ರಾಯಚೂರು: ಕುರಿಗಳ ಮೇಲೆ ಹಾಯುವುದನ್ನು ತಪ್ಪಿಸಲು ಅರ್ಟಿಸಿ ಬಸ್ಸನ್ನು ತಗ್ಗಿಗೆ ಇಳಿಸಿದ ಡ್ರೈವರ್, ಎಲ್ಲರೂ ಸುರಕ್ಷಿತ
ಬಸ್ಸಿನ ಚಾಲಕ ಪ್ರಭಾಕರ್ ನಮ್ಮ ರಾಯಚೂರು ವರದಿಗಾರನೊಂದಿಗೆ ಮಾತಾಡಿದ್ದಾರೆ, ಅವರು ಹೇಳುವ ಪ್ರಕಾರ ಬಸ್ಸಲ್ಲಿ ಸುಮಾರು 15 ಜನ ಪ್ರಯಾಣಿಸುತ್ತಿದ್ದರು. ಗ್ರಾಮೀಣ ಕರ್ನಾಟಕದಲ್ಲಿ ಇಂಥ ಘಟನೆಗಳು ನಡೆಯೋದು ಅಪರೂಪವೇನಲ್ಲ, ಬೆಳಗಿನ ಸಮಯದಲ್ಲಿ ಕುರಿಗಾಹಿ ಮತ್ತು ದನಗಾಹಿಗಳು ದನಕರು, ಕುರಿಗಳನ್ನು ಮೇಯಿಸುವುದಕ್ಕೆ ಬಯಲು ಪ್ರದೇಶಗಳಿಗೆ ಕರೆದೊಯ್ಯುವಾಗ ಪ್ರಾಣಿಗಳು ವಾಹನಗಳಿಗೆ ಅಡ್ಡಬಂದುಬಿಡುತ್ತವೆ.
ರಾಯಚೂರು, ಜುಲೈ 23: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಸಿರವಾರ ಡಿಪೋಗೆ ಸೇರಿದ ಬಸ್ಸು ರಸ್ತೆ ಬಿಟ್ಟು ಅಪಾಯಕಾರಿಯಾಗಿ ಹೀಗೆ ತಗ್ಗಿಗೆ ಇಳಿದರೂ ಯಾರೂ ಗಾಯಗೊಂಡಿಲ್ಲ ಮತ್ತು ಡ್ರೈವರ್ (driver) ಹಾಗೂ ಕಂಡಕ್ಟರ್ ಕೂಡ ಸುರಕ್ಷಿತವಾಗಿದ್ದಾರೆ. ಇಂದು ಬೆಳಗ್ಗೆ ಸಿರವಾರ ತಾಲೂಕಿನ ನಿಲೋಗಲ್ ಕ್ರಾಸ್ ಬಳು ನಡೆದ ಘಟನೆ ಇದು. ಅಸಲಿಗೆ ನಡೆದಿದ್ದೇನೆಂದರೆ, ಬಸ್ಸು ರಸ್ತೆಮೇಲೆ ಬಸ್ಸು ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಕುರಿಹಿಂಡೊಂದು ಬಸ್ಸಿಗೆ ಅಡ್ಡಬಂದುಬಿಟ್ಟಿದೆ, ಕುರಿಗಳ ಮೇಲೆ ಹರಿಯುವುದನ್ನು ತಪ್ಪಿಸಲು ಚಾಲಕ ಜೋರಾಗಿ ಬ್ರೇಕ್ ಅದುಮಿದ್ದಾರೆ. ಆಗಲೇ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬಿಟ್ಟು ತಗ್ಗಿಗೆ ಇಳಿದಿದೆ, ಯಾರಿಗೂ ಗಾಯಗಳಾಗದಿರೋದು ಅದೃಷ್ಟದ ಸಂಗತಿ.
ಇದನ್ನೂ ಓದಿ: ಹೊಸಕೋಟೆ ಗೊಟ್ಟಿಪುರ ಗೇಟ್ ಬಳಿ ಭೀಕರ ಅಪಘಾತ: ಲಾರಿ, ಆಂಧ್ರ ಸಾರಿಗೆ ಬಸ್ ಡಿಕ್ಕಿಯಾಗಿ ನಾಲ್ವರು ಸಾವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ