VIDEO: ಉಫ್… ವಾಟ್ ಎ ಕ್ಯಾಚ್: ಎಬಿಡಿಯ ಫೀಲ್ಡಿಂಗ್ಗೆ ಪ್ರೇಕ್ಷಕರು ದಂಗು
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ 18.2 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 111 ರನ್ಗಳಿಸಿತ್ತು. ಈ ವೇಳೆ ಫ್ಲಡ್ ಲೈಟ್ ಸಮಸ್ಯೆ ಎದುರಾಗಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ನಡೆದ ಇಂಡಿಯಾ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡ ಜಯ ಸಾಧಿಸಿದೆ. ನಾರ್ಥಂಪ್ಟನ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದ ಗೆಲುವಿನ ರೂವಾರಿ ಎಬಿ ಡಿವಿಲಿಯರ್ಸ್. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಎಬಿಡಿ ಕೇವಲ 30 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 63 ರನ್ ಬಾರಿಸಿದ್ದರು. ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.
209 ರನ್ಗಳ ಕಠಿಣ ಗುರಿ ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ 10 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 66 ರನ್ಗಳು ಮಾತ್ರ. ಇದಕ್ಕೆ ಮುಖ್ಯ ಕಾರಣ ಎಬಿ ಡಿವಿಲಿಯರ್ಸ್ ಅವರ ಫೀಲ್ಡ್ ಸೆಟ್ಟಿಂಗ್. ಬೌಲರ್ಗಳ ಡಿಮ್ಯಾಂಡ್ಗೆ ತಕ್ಕಂತೆ ಫೀಲ್ಡಿಂಗ್ ನಿಲ್ಲಿಸಿದ ಎಬಿಡಿ ಭಾರತೀಯ ಬ್ಯಾಟರ್ಗಳ ಮೇಲೆ ಆರಂಭದಲ್ಲೇ ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ಅದರಲ್ಲೂ ಪಂದ್ಯದ 8ನೇ ಓವರ್ನ ಮೊದಲ ಎಸೆತದಲ್ಲಿ ಅದ್ಭುತ ಫೀಲ್ಡಿಂಗ್ನೊಂದಿಗೆ ಎಬಿಡಿ ಗಮನ ಸೆಳೆದರು. ಇಮ್ರಾನ್ ತಾಹಿರ್ ಎಸೆದ ಈ ಎಸೆತದಲ್ಲಿ ಯೂಸುಫ್ ಪಠಾಣ್ ಭರ್ಜರಿ ಹೊಡೆತ ಬಾರಿಸಿದ್ದರು. ಚೆಂಡು ಇನ್ನೇನು ಬೌಂಡರಿ ಲೈನ್ ದಾಟಲಿದೆ ಅನ್ನುವಷ್ಟರಲ್ಲಿ ಓಡಿ ಬಂದ ಎಬಿ ಡಿವಿಲಿಯರ್ಸ್ ಅದ್ಭುತ ಡೈವಿಂಗ್ನೊಂದಿಗೆ ಚೆಂಡನ್ನು ಹಿಡಿದರು.
ಇದೇ ವೇಳೆ ನಿಯಂತ್ರಣವನ್ನು ಕಳೆದುಕೊಂಡ ಎಬಿಡಿ ಬೌಂಡರಿ ಗೆರೆಯನ್ನು ಮುಟ್ಟುವ ಮೊದಲು ಚೆಂಡನ್ನು ಗಾಳಿಯಲ್ಲಿ ತಂಡದ ಸಹ ಆಟಗಾರ ಸರೆಲ್ ಎರ್ವೀಗೆ ಫ್ಲಿಕ್ ಮಾಡಿದರು. ಎರ್ವೀ ಅದ್ಭುತವಾಗಿ ಡೈವ್ ಹೊಡೆದು ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಇದೀಗ ಎಬಿಡಿ-ಸರೆಲ್ ಹಿಡಿದ ಜಂಟಿ ಕ್ಯಾಚ್ ವಿಡಿಯೋ ವೈರಲ್ ಆಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ 18.2 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 111 ರನ್ಗಳಿಸಿತ್ತು. ಈ ವೇಳೆ ಫ್ಲಡ್ ಲೈಟ್ ಸಮಸ್ಯೆ ಎದುರಾಗಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ವಿರುದ್ಧ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 88 ರನ್ಗಳ ಗೆಲುವು ದಾಖಲಿಸಿದೆ.

