ಮಹಾರಾಷ್ಟ್ರ ನೋಂದಣಿಯ 2 ಐಷಾರಾಮಿ ಕಾರುಗಳಿಗೆ ₹ 38 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿಸಿದ ಕೆಜಿಎಫ್ ಬಾಬು
ಮಾಧ್ಯಮಗಳೊಂದಿಗೆ ಮಾತಾಡಿದ ಮಹಿಳಾ ಅಧಿಕಾರಿ, ಬಾಬು ಅವರ ಮಹಾರಾಷ್ಟ್ರ ನೋಂದಣಿಯ ಎರಡು ಐಷಾರಾಮಿ ಕಾರುಗಳು ಬೆಂಗಳೂರಲ್ಲಿ ಓಡಾಡುತ್ತಿರೋದು ಗಮನಕ್ಕೆ ಬಂತು, ಕರ್ನಾಟಕದಲ್ಲಿ ಟ್ಯಾಕ್ಸ್ ಕಟ್ಟುವ ವಿಚಾರ ತಿಳಿಸಿದಾಗ ಅವರು ₹19.73 ಲಕ್ಷ ಮತ್ತು ₹18.53 ಲಕ್ಷಗಳ ಎರಡು ಚೆಕ್ಗಳನ್ನು ಇಲಾಖೆಗೆ ನೀಡಿ ಸಹಕರಿಸಿದ್ದಾರೆ ಎಂದು ಹೇಳಿದರು.
ಬೆಂಗಳೂರು, ಜುಲೈ 23: ರೀಯಲ್ಟರ್ ಕೆಜಿಎಫ್ ಬಾಬು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನಡುವೆ ಮಹಾರಾಷ್ಟ್ರ ನೋಂದಣಿಯ ಎರಡು ಕಾರುಗಳ ತೆರಿಗೆಗೆ ಸಂಬಂಧಿಸಿದ ವಿವಾದ ಸುಖಾಂತ್ಯ ಕಂಡಿದೆ. ಹಿರಿಯ ಮಹಿಳಾ ಅಧಿಕಾರಿಯೊಬ್ಬರು (women officer) ಯಾಕೆ ತೆರಿಗೆ ಕಟ್ಟಬೇಕು ಅನ್ನೋದನ್ನು ಬಾಬು ಅವರಿಗೆ ವಿವರಿಸಿದ ಬಳಿಕ ಉದ್ಯಮಿ ತೆರಿಗೆ ಹಣಕ್ಕೆ ಚೆಕ್ ಗಳನ್ನು ನೀಡಿದರು. ಚೆಕ್ ಗಳನ್ನು ಅಧಿಕಾರಿಯ ಕೈಗೆ ನೀಡುತ್ತ ಅವರ ಬಗ್ಗೆ ಮಾತಾಡಿದ ಬಾಬು, ನಿಮ್ಮಂಥ ಅಧಿಕಾರಿಗಳು ಇಲಾಖೆಗೆ ಬೇಕು, ನೀವು ಇಲ್ಲಿಯವರೆಗೆ ಬಂದು ತೆರಿಗೆ ಯಾವ ಬಾಬತ್ತಿನಲ್ಲಿ ಕಟ್ಟಬೇಕು ಮತ್ತು ಕಟ್ಟಿದ ಹಣ ರೀಫಂಡ್ ಆಗುವ ಬಗ್ಗೆ ವಿವರಿಸಿದ್ದೀರಿ, ನಿಮ್ಮ ಬಗ್ಗೆ ನಮಗೆ ಬಹಳ ಗೌರವ ಮತ್ತು ಹೆಮ್ಮೆ ಹುಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ: ಕೆಜಿಎಫ್ ಬಾಬುಗೆ ಮುಳುವಾಯ್ತು ಅಮಿತಾಭ್, ಆಮಿರ್ ಬಳಿ ಖರೀದಿಸಿದ ಐಷಾರಾಮಿ ಕಾರುಗಳು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ

