ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರನ್ನು ಟಾರ್ಗೆಟ್ ಮಾಡುತ್ತಿದೆ: ವಿಜಯೇಂದ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕೋಸ್ಕರ ಕಾಂಗ್ರೆಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡುವ ನಾಟಕ ಮಾಡಿದ್ದಾರೆ, ಅನುದಾದ ಬಿಡುಗಡೆಗೆ ಅವರು ಪತ್ರವನ್ನಷ್ಟೇ ಬರೆದಿರೋದು, ಬಿಡುಗಡೆ ಭಾಗ್ಯ ಇನ್ನೂ ಯಾವಾಗಲೋ? ವಿರೋಧ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದಿರುವ ಮೂಲಕ ಮುಖ್ಯಮಂತ್ರಿ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಕಲಬುರಗಿ, ಜುಲೈ 19: ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಬಿಜೆಪಿ ಶಾಸಕರನ್ನು ಹೆದರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಬಿವೈ ವಿಜಯೇಂದ್ರ ನಗರದಲ್ಲಿ ಹೇಳಿದರು. ಬಿಜೆಪಿ ಶಾಸಕ ಭೈರತಿ ಬಸವರಾಜ್ (Byrathi Basavaraj) ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವನ್ನು ಸರ್ಕಾರ ಮಾಡುತ್ತಿದೆ, ಬಿಕ್ಲು ಶಿವ ಕೊಲೆ ಪ್ರಕರರಣದಲ್ಲಿ ತನ್ನದೇನೂ ಪಾತ್ರವಿಲ್ಲ ಅಂತ ಖುದ್ದು ಬಸವರಾಜ ಹೇಳಿದ್ದಾರೆ, ಮತ್ತು ಕೊಲೆಯಾದ ಶಿವನ ತಾಯಿ ಸಹ ಶಾಸಕನ ಹೆಸರನ್ನು ತಾನು ಹೇಳಿಲ್ಲ ಅಂತ ಹೇಳಿದ್ದಾರೆ ಅಂತ ಅವರು ಹೇಳಿದರು. ಹಾಗೆ ನೋಡಿದರೆ, ಬಿಕ್ಲು ತಾಯಿ ವಿಜಯಲಕ್ಷ್ಮಿ ಕಾಂಗ್ರೆಸ್ ಕಾರ್ಯಕರ್ತೆ ಅಲ್ಲ, ಆಕೆ ದೂರಿನಲ್ಲಿ ಶಾಸಕನ ಜೊತೆ ಇನ್ನೂ ನಾಲ್ವರ ಹೆಸರನ್ನು ದಾಖಲಿಸಿದ್ದಳು ಅಂತ ಗೃಹ ಸಚಿವ ಹೇಳಿದ್ದರು. ಬಸವರಾಜ್ ಅವರು ನಮ್ಮ ವರದಿಗಾರನೊಂದಿಗೆ ಮಾತಾಡುವಾಗ ತನ್ನಿಂದ ಜೀವ ಬೆದರಿಕೆ ಇದೆ ಅಂತ ಬಿಕ್ಲು ಶಿವ ಪೊಲೀಸ್ ದೂರು ದಾಖಲಿಸಿದ್ದ ಅಂತಲೂ ಹೇಳಿದ್ದರು. ಇದರಲ್ಲಿ ಬಸವರಾಜ ಅವರನ್ನು ಟಾರ್ಗೆಟ್ ಮಾಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ?
ಇದನ್ನೂ ಓದಿ: ಸಿದ್ದರಾಮಯ್ಯ ತಾವು ಹೇಳಬೇಕಿರುವುದನ್ನು ರಾಯರೆಡ್ಡಿ ಮೂಲಕ ಹೇಳಿಸುತ್ತಿದ್ದಾರೆ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ