Viral Video: ಪ್ರತಿಭೆ ಯಾರಪ್ಪನ ಮನೆ ಆಸ್ತಿಯೂ ಅಲ್ಲ! ನೋಡದೆಯೇ, ಎರಡೂ ಕೈಗಳನ್ನು ಬೆನ್ನಿಗೆ ಮಾಡಿಕೊಂಡು ಆಂಜನೇಯ ಸ್ವಾಮಿ ಚಿತ್ರ ಬಿಡಿಸಿದ ಮಹಿಳೆ!
ವೈರಲ್ ವೀಡಿಯೊ: ಕ್ರಮೇಣ ಆ ಗ್ರಾಮೀಣ ಪ್ರತಿಭೆ ಬಿಡಿಸುತ್ತಿದ್ದ ಆಕೃತಿ ಹನುಮಂತನ ರೂಪ ಪಡೆಯುತ್ತಾ ಸಾಗಿದಂತೆ, ಚಿತ್ರ ಪೂರ್ಣಗೊಂಡಾಗ ನೀವು ಭಕ್ತಿಭಾವದಿಂದ ಕೈಮಗಿಯುತ್ತೀರಿ... ಚಿತ್ರಕ್ಕೆ ಮತ್ತು ಆ ಚಿತ್ರ ಬಿಡಿಸಿದ ಮಹಿಳೆಗೆ.
Viral Video: ಜಗತ್ತಿನಲ್ಲಿ ಎಂತೆಂಥಾ ಕೌಶಲ್ಯದ ಕಲಾವಿದರಿದ್ದಾರೆ! ಅದಕ್ಕೇ ಹೇಳಿದ್ದು ಪ್ರತಿಭೆ ಯಾರಪ್ಪನ ಮನೆ ಆಸ್ತಿಯೂ ಅಲ್ಲ! ಕೆಲವರು ತಮ್ಮ ಕಲಾತ್ಮಕ ಕೌಶಲ್ಯದಿಂದ ಸುಂದರವಾದ ಚಿತ್ರಗಳನ್ನು ರಚಿಸುತ್ತಾರೆ. ಈ ಕಲಾವಿದರ ಪ್ರತಿಭೆ ನೋಡಿದವರು ವಾವ್ ಎನ್ನದೇ ಇರಲಾರರು. ಆದರೆ ಹೆಚ್ಚಿನ ಕಲಾತ್ಮಕ ಪ್ರತಿಭೆಯು ನಗರ ಅಥವಾ ಸುಶಿಕ್ಷಿತರಲ್ಲಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಈ ನೆಲದ ಮಣ್ಣಿನಲ್ಲಿರುವ ಮಾಣಿಕ್ಯಗಳು ಸಹ ಆಗಾಗ ಬೆಳಕಿಗೆ ಬರುತ್ತವೆ.
ಗ್ರಾಮೀಣ ಮಹಿಳೆಯರೂ ಕೆಲವು ವಿಶೇಷ ಕೌಶಲ್ಯಗಳನ್ನು ಹೊಂದಿರುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಬೆರಣಿ ತಟ್ಟುವುದು, ತಲೆಯ ಬಿಂದಿಗೆ ಮೇಲೆ ಬಿಂದಿಗೆ ಹೊತ್ತು ನಡೆಯುವುದು, ವರ್ಣರಂಜಿತ ರಂಗೋಲಿ ಬಿಡಿಸುವುದು… ಹೀಗೇ ವಿವಿಧ ಕೌಶಲ್ಯ ಹೊಂದಿರುವ ಮಹಿಳೆಯರ ವಿಡಿಯೋಗಳು ಇಂಟರ್ ನೆಟ್‌ನಲ್ಲಿ ಆಗಾಗ ಸದ್ದು ಮಾಡುತ್ತವೆ. ಆದರೆ ಇದೀಗ ಗ್ರಾಮೀಣ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಆ ಮಹಿಳೆಯ ಪ್ರತಿಭೆ ನೋಡಿ ವ್ಹಾವ್ ಎನ್ನದವರೇ ಇಲ್ಲ.. ಹೊಗಳಿಕೆಯ ಸುರಿಮಳೆ ಮಾಡದವರೇ ಇಲ್ಲ.. ಹಾಗಾದರೆ ಈ ಅದ್ಭುತ ವಿಡಿಯೋದಲ್ಲಿ ಅಂಥದ್ದೇನಿದೆ!?
ಈ ಮಹಿಳೆ ಅದ್ಭುತ ಡ್ರಾಯಿಂಗ್ ಕೌಶಲ್ಯವನ್ನು (ಚಿತ್ರ ಕಲೆ ಬಿಡಿಸುವುದು) ಹೊಂದಿದ್ದಾಳೆ. ಅಷ್ಟೊಂದು ಕೌಶಲ ಆಕೆಯಲ್ಲಿದೆ.. ನೋಡದೆಯೇ, ಏಕಕಾಲಕ್ಕೆ ಎರಡು ಕೈಗಳನ್ನು ಬೆನ್ನಿಗೆ ಮಾಡಿಕೊಂಡು ಹಿಂದೂಗಳ ಆರಾಧ್ಯದೈವ ಹನುಮಂತನ ಸುಂದರವಾದ ಚಿತ್ರವನ್ನು ಬಿಡಿಸಿದ್ದಾರೆ. ಇದಕ್ಕೆ ನೀವು ಶರಣು ಶರಣು ಅನ್ನಲೇ ಬೇಕು. ಹಳದಿ ಸೀರೆಯನ್ನು ಧರಿಸಿದ ಮಹಿಳೆ ಎರಡೂ ಕೈಗಳಲ್ಲಿ ಎರಡು ಸೀಮೆಸುಣ್ಣವನ್ನು ಹಿಡಿದಿದ್ದಾಳೆ. ಕಪ್ಪು ಹಲಗೆಗೆ ಬೆನ್ನು ಮಾಡಿ, ನಗುನಗುತಾ ಪವಾಡವೆಂಬಂತೆ ಚಿತ್ರ ಬಿಡಿಸಿದ್ದಾಳೆ ಆ ಮಹಿಳೆ. ಕ್ರಮೇಣ ಆ ಗ್ರಾಮೀಣ ಪ್ರತಿಭೆ ಬಿಡಿಸುತ್ತಿದ್ದ ಆಕೃತಿ ಹನುಮಂತನ ರೂಪ ಪಡೆಯುತ್ತಾ ಸಾಗಿದಂತೆ, ಚಿತ್ರ ಪೂರ್ಣಗೊಂಡಾಗ ನೀವು ಭಕ್ತಿಭಾವದಿಂದ ಕೈಮಗಿಯುತ್ತೀರಿ… ಚಿತ್ರಕ್ಕೆ ಮತ್ತು ಆ ಚಿತ್ರ ಬಿಡಿಸಿದ ಮಹಿಳೆಗೆ.
ಈ ಅದ್ಭುತ ವಿಡಿಯೋ ಇದುವರೆಗೆ 10 ಲಕ್ಷ ವೀಕ್ಷಣೆ ಪಡೆದಿದೆ. ವೀಕ್ಷಣೆಗಳು, 1 ಲಕ್ಷ 33 ಸಾವಿರ ಲೈಕ್‌ಗಳು ನಿಮ್ಮ ಪ್ರತಿಭೆಗೆ ನಮ್ಮ ಸೆಲ್ಯೂಟ್ ಎಂದು ಕೆಲವರು ಹೇಳುತ್ತಾರೆ.. ಇನ್ನು ಕೆಲವರು ಮಹಿಳೆಯ ಮುಂದೆ ಕನ್ನಡಿ ಇದ್ದಿರಬೇಕು. ಅದನ್ನು ನೋಡುತ್ತಾ ಚಿತ್ರ ಬಿಡಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.. ಅದಕ್ಕೆ ಉತ್ತರವಾಗಿ ಇನ್ನು ಕೆಲವರು ಕನ್ನಡಿಯಲ್ಲಿ ನೋಡಿಕೊಂಡು ಚಿತ್ರ ಬಿಡಿಸಿದರೂ ಎರಡೂ ಕೈ ಹಿಂದಕ್ಕೆ ಎತ್ತಿ ಆಕೃತಿ ಬಿಡಿಸುವುದು ಅಷ್ಟು ಸುಲಭವಲ್ಲ ಎಂದು ಕಮೆಂಟ್ ಮಾಡಿದ್ದಾರೆ.