ಮೈಸೂರು: ಹೆಚ್ ಡಿ ಕೋಟೆಯ ಕೊಡಸಿ ಗ್ರಾಮದಲ್ಲಿ ಕಾಡಾನೆಯೊಂದರ ಪುಂಡಾಟ
ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಆನೆಯನ್ನು ಪುನಃ ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮೈಸೂರು: ಕಾಡಾನೆಯೊಂದು ನಾಡಿಗೆ ನುಗ್ಗಿ ಬೆಳೆದು ನಿಂತ ಪೈರಿನ ಜಮೀನು ಹೊಕ್ಕಿತು ಅಂದ್ರೆ ಬೆಳೆ ಸರ್ವನಾಶ ಅಂತಲೇ ಅರ್ಥ. ಮೈಸೂರಿ ಹೆಚ್ ಡಿ ಕೋಟೆ (HD Kote) ತಾಲ್ಲೂಕಿನ ಕೊಡಸಿ (Kodasi) ಗ್ರಾಮದಲ್ಲಿರುವ ಜಮೀನೊಂದಕ್ಕೆ ನುಗ್ಗಿರುವ ಕಾಡಾನೆಯೊಂದು ಬಾಳೆ, ಅಡಿಕೆ, ಅರಿಶಿಣ ಮತ್ತು ಮುಸುಕಿನ ಜೋಳದ ಬೆಳೆಗಳನ್ನು ತುಳಿದು ಹಾಳು ಮಾಡಿದೆ. ಸುದ್ದಿ ತಿಳಿದ ಅರಣ್ಯಾಧಿಕಾರಿಗಳು (forest officials) ಸ್ಥಳಕ್ಕೆ ದೌಡಾಯಿಸಿ ಆನೆಯನ್ನು ಪುನಃ ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದ್ದಾರೆ.